Latest

ಆಪ್ ಆಧಾರಿತ ಕ್ಯಾಬ್, ಬೈಕ್ ಕಂಪನಿಗಳಿಗೆ ಕಠಿಣ ನಿಯಮ ಜಾರಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಪ್ ಆಧಾರಿತ ಅಗತ್ಯ ಸೇವಾ ಟ್ಯಾಕ್ಸ್, ಬೈಕ್ ಕಂಪನಿಗಳಿಗೆ ಟಫ್ ರೂಲ್ಸ್ ಜಾರಿಗೆ ತರಲಾಗಿದೆ.

ನಗರದಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಚಾಲಕರಿಂದ ಲೈಂಗಿಕ ದೌರ್ಜನ್ಯ, , ಕಿರುಕುಳ, ದರೋಡೆ, ಸುಲಿಗೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಆಪ್ ಆಧಾರಿತ ಅಗತ್ಯ ಸೇವಾ ಕಂಪನಿಗಳ ಮುಖ್ಯಸ್ಥರ ಜೊತೆ ಕಮೀಷನರ್ ಪ್ರತಾಪ್ ರೆಡ್ಡಿ ಹಾಗೂ ಅಧಿಕಾರಿಗಳು ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಕಮಿಷ್ನರ್ ಪ್ರತಾಪ್ ರೆಡ್ಡಿ, ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಕೆಲಸಕ್ಕೆ ಸೇರುವವರ ಹಿನ್ನೆಲೆ ಪರಿಶೀಲಿಸುವುದು ಕಂಪನಿ ಜವಾಬ್ದಾರಿ. ಅವರ ವಿಳಾಸ ಪರಿಶೀಲನೆ ಕಡ್ಡಾಯ. ಅಪರಾಧ ಹಿನ್ನೆಲೆಯುಳ್ಳವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಂತಿಲ್ಲ. ಸಿಬ್ಬಂದಿ ನೇಮಕವಾದ ಬಳಿಕ ತಿಂಗಳಿಗೊಮ್ಮೆ ಅವರ ಹಿನ್ನೆಲೆ ಪರಿಶೀಲಿಸುವುದು ಕಡ್ಡಾಯ. ನೇಮಕವಾದ ಬಳಿಕ ಸಂಪೂರ್ಣ ಮಾಹಿತಿ ಕಂಪನಿ ಆಪ್ ನಲ್ಲಿ ನಮೂದಿಸಬೇಕು.

ಮುಂದಿನ ದಿನಗಳಲ್ಲಿ ಅನುಚಿತ ವರ್ತನೆ, ಅಥವಾ ಅಪರಾಧ ಪ್ರಕರಣಗಳು ನಡೆದರೆ ಸಂಬಂಧಪಟ್ಟ ಆಪ್ ಆಧಾರಿತ ಕ್ಯಾಬ್, ಬೈಕ್ ಕಂಪನಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Home add -Advt

 

ರೈಲಿಗೆ ಸಿಲುಕಿ ಎರಡೂ ಕಾಲುಗಳನ್ನು ಕಳೆದುಕೊಂಡ ತರಕಾರಿ ಮಾರಾಟಗಾರ

https://pragati.taskdun.com/a-vegetable-seller-who-lost-both-his-legs-after-being-hit-by-a-train/

Related Articles

Back to top button