GIT add 2024-1
Laxmi Tai add
Beereshwara 33

ಅಪರಾಧಿ ಬಿಟ್ಟು ಇನ್ನಾರದೋ ಬಂಧನ; ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ 5 ಲಕ್ಷ ರೂ. ದಂಡ

ಮಂಗಳೂರು ಗ್ರಾಮಾಂತರದಲ್ಲಿ ನಡೆದ ಪೋಕ್ಸೋ ಪ್ರಕರಣದಲ್ಲಿ ಪೊಲೀಸರ ಎಡವಟ್ಟು

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಮಂಗಳೂರು: ಪೋಕ್ಸೋ ಪ್ರಕರಣವೊಂದರಲ್ಲಿ ನೈಜ ಅಪರಾಧಿಯನ್ನು ಬಿಟ್ಟು ಬೇರೊಬ್ಬ ಅಮಾಯಕನನ್ನು ಬಂಧಿಸಿ ಒಂದು ವರ್ಷ ಜೈಲಿನಲ್ಲಿ ಕೊಳೆಯುವಂತೆ ಮಾಡಿದ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಎರಡನೇ ಹೆಚ್ಚುವರಿ ತ್ವರಿತ ವಿಶೇಷ ನ್ಯಾಯಾಲಯ 5 ಲಕ್ಷ ರೂ. ದಂಡ ವಿಧಿಸಿದೆ.

ನಗರದ ಮಹಿಳಾ ಪೊಲೀಸ್ ಠಾಣೆಯ ಈ ಹಿಂದೆ ಇನಸ್ಪೆಕ್ಟರ್ ಆಗಿದ್ದ ಪ್ರಕರಣದ ತನಿಖಾಧಿಕಾರಿ ರೇವತಿ ಹಾಗೂ ಎಸ್.ಐ. ಆಗಿದ್ದ ರೋಸಮ್ಮ ಪಿ.ಪಿ. ಬಂಧನಕ್ಕೊಳಗಾಗಿದ್ದ ನವೀನ್ ಸಿಕ್ಚೇರಾ ಅವರಿಗೆ ಸ್ವಂತ ಜೇಬಿನಿಂದ 5 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶಿಸಿದೆ.

ಇದೇ ವೇಳೆ ಈ ಇಬ್ಬರೂ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಧೀಶ ಕೆ.ಯು.ರಾಧಾಕೃಷ್ಣ ಆದೇಶಿಸಿದ್ದಾರೆ.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ನವೀನ್ ಎಂಬಾತ ಆರೋಪಿಯಾಗಿದ್ದ. ಬಾಲಕಿಯ ಹೇಳಿಕೆ ಪಡೆದ ಎಸ್.ಐ. ರೋಸಮ್ಮ ಪಿ.ಪಿ. 2021ರ ನವೆಂಬರ್ ನಲ್ಲಿ ಪ್ರಕರಣ ದಾಖಲಿಸಿ ತನಿಖಾಧಿಕಾರಿ ರೇವತಿ ಅವರಿಗೆ ಹಸ್ತಾಂತರಿಸಿದ್ದರು.

Emergency Service

ತನಿಖೆ ವೇಳೆ ಮಂಗಳೂರು ಗ್ರಾಮಾಂತರ ಠಾಣೆ ಎಎಸ್ಐ ಕುಮಾರ್ ಅವರು ನೈಜ ಆರೋಪಿ ಬದಲು ನವೀನ್ ಸಿಕ್ವೇರಾ ಎಂಬುವವರನ್ನು ಬಂಧಿಸಿದ್ದರು. ಸಂತ್ರಸ್ತ ಬಾಲಕಿ, ಸಾಕ್ಷ್ಯ ನುಡಿದವರು ಹಾಗೂ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಆರೋಪಿ ಹೆಸರು ನವೀನ್ ಎಂದಿತ್ತು. ಇನ್ಸ್ಪೆಕ್ಟರ್ ರೇವತಿ ಅವರು ನವೀನ್ ಸಿಕ್ವೇರಾ ಅವರ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಸಂತ್ರಸ್ತೆ ಹೇಳಿಕೆ ನೀಡುವಾಗ ಆರೋಪಿಗೆ 25ರಿಂದ 27 ವರ್ಷಗಳಿರಬಹುದು ಹೇಳಿದ್ದಳು. ಆದರೆ ಬಂಧನಕ್ಕೊಳಗಾದ ನವೀನ್ ಸಿಕ್ವೇರಾ ಅವರ ವಯಸ್ಸು 47 ಆಗಿದ್ದು ಪೊಲೀಸರ ಎಡವಟ್ಟು ಇದರಿಂದಲೇ ಹೊರಬರುವಂತಾಯಿತು.

ಪೊಲೀಸರು ಆರೋಪಿಯನ್ನು ಬಂಧಿಸಿದ ನಂತರ ಸಂತ್ರಸ್ತ ಬಾಲಕಿ ಎದುರು ಹಾಜರುಪಡಿಸದೆ, ನೇರವಾಗಿ ನ್ಯಾಯಾಲಯಕ್ಕೆ ಹಾಜರು ಮಾಡಿದ್ದಾರೆ ಎಂದು ಸಿಕ್ವೇರಾ ಪರ ವಕೀಲರಾದ ರಾಜೇಶಕುಮಾರ್ ಅಮ್ಟಾಡಿ ಹಾಗೂ ಗಿರೀಶ ಶೆಟ್ಟಿ ವಾದಿಸಿವಿಚಾರಣೆ ವೇಳೆ ಸಾಬೀತುಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಮಾಯಕ ನವೀನ್ ಸಿಕ್ವೇರಾ ಅವರನ್ನು ಬಿಡುಗಡೆ ಮಾಡಿದ್ದು ನಿಜವಾದ ಆರೋಪಿ ಬಂಧನದಲ್ಲಿ ಪೊಲೀಸರು ತೊಡಗಿದ್ದಾರೆ.

ಚಿರತೆ ದಾಳಿ: ಮೃತಪಟ್ಟವರ ಕುಟುಂಬದವರಿಗೆ 15 ಲಕ್ಷ ರೂ.ಗಳ ಪರಿಹಾರ: ಸಿಎಂ ಬೊಮ್ಮಾಯಿ

Bottom Add3
Bottom Ad 2