Election NewsKannada NewsKarnataka NewsUncategorized

ಕೋಟಾ ನೋಟ್ ತಯಾರಿಸುತ್ತಿದ್ದ ಇಬ್ಬರ ಬಂಧನ

ಪ್ರಗತಿವಾಹಿನಿ ಸುದ್ದಿ: ಲಾಡ್ಜವೊಂದರಲ್ಲಿ ನಕಲಿ‌ ನೋಟ್ ಪ್ರಿಂಟ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಳ್ಳಾರಿಯ ಗಾಂಧಿನಗರ ಪೊಲೀಸರು ಕಾರ್ಯಚರಣೆ ಮಾಡಿ ಬಂಧಿಸಿದ್ದಾರೆ.‌

ಬಳ್ಳಾರಿಯ ಕೋಲಾಚಲಂ ಕಾಂಪೌಂಡ್‌ ನಲ್ಲಿರುವ ಮೋಹನ್ ಲಾಡ್ಜ್‌ ಮೇಲೆ ದಾಳಿ ನಡೆಸಿದ ಪೊಲೀಸರು, ನಕಲಿ  ನೋಟುಗಳನ್ನು ಪ್ರಿಂಟ್ ಮಾಡಿ ತೆಗೆಯುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಪಿಐ ಸಿದ್ದರಾಮೇಶ್ವರ, ಪಿಎಸ್ಐ ಸೌಮ್ಯಾ ನೇತೃತ್ವದಲ್ಲಿ ಕಾರ್ಯಚರಣೆ ಮಾಡಿ ಬಂಧಿಸಿದ್ದಾರೆ‌‌.‌

ಆರೋಪಿಗಳಾದ ಅಶೋಕ್ ಕುಮಾರ್ ಮತ್ತು ಹರೀಶ್ ಕುಮಾರ್ ಬಂಧಿತರು.  ಎ-1 ಆರೋಪಿ ಅಶೋಕ್ ಕುಮಾರ್ ಬ್ಯಾಂಕ್ ಆಫ್ ಬರೋಡಾದಲ್ಲಿ ಗುತ್ತಿಗೆ ಕೆಲಸ ಮಾಡುತಿದ್ದ, ಬ್ಯಾಂಕಿನಲ್ಲಿ ನೋಟ್ ಚಲಾವಣೆ ವಹಿವಾಟು  ಅಶೋಕ ಕುಮಾರ್ ಅರಿತು ಅಶೋಕ್ ಕುಮಾರ್, ಹರೀಶ್ ಜೊತೆಗೆ ಸೇರಿ ನೋಟ್‌ ಪ್ರಿಂಟ್ ಮಾಡಲು ಮುಂದಾಗಿದ್ದಾನೆ.‌

ದಾಳಿ ವೇಳೆ 100 ರೂಪಾಯಿ ಮುಖಬೆಲೆಯ ಒಟ್ಟು 80 ನಕಲಿ‌ ನೋಟುಗಳನ್ನು ಜಪ್ತಿ ಮಾಡಲಾಗಿದೆ. ಜೊತೆಗೆ ಕೋಟಾ ನೋಟುಗಳನ್ನು ತಯಾರು ಮಾಡಲು ಬಳಸುತ್ತಿದ್ದ ಕಲರ್ ಜಿರಾಕ್ಸ್ ಪ್ರಿಂಟರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.‌

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button