ಪ್ರಗತಿವಾಹಿನಿ ಸುದ್ದಿ, ಶಿರಸಿ: ಅಡಿಕೆ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಬನವಾಸಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಿರಸಿ ಚಿಪಗಿಯಲ್ಲಿ ನೆಲೆಸಿದ್ದ ಮುಡೇಬೈಲ್ ನಿವಾಸಿ ಶೇಖರ ಬೊಮ್ಮ ಗೌಡ (42) ಹಾಗೂ ಎಸಳೆಯ ಆಟೋ ಚಾಲಕ ರಾಘವೇಂದ್ರ ಪರಮಾನಂದ ಶಿರಟ್ಟಿ (32) ಬಂಧಿತರು.
ಕಳೆದ ಆ. 10ರಂದು ರಂದು ಭದ್ರಾಪುರದ ಅಡಿಕೆ ಬೆಳೆಗಾರ ಅಬ್ದುಲ್ ಖುದ್ದುಸ್ ಅಹಮ್ಮದ್ ಸಾಬ್, 50 ಸಾ.ಭದ್ರಾಪುರ ಮನೆಯ ಪಕ್ಕದ ಗೋಡೌನ್ ನಲ್ಲಿ ಭದ್ರವಾಗಿ ಇಟ್ಟಿದ್ದ ತಮ್ಮ ಜಮೀನಿನಲ್ಲಿ ಬೆಳೆದ ಹಸಿ ಅಡಿಕೆಗಳಲ್ಲಿ 60ರಿಂದ 65 ಸಾವಿರ ರೂ. ಅಂದಾಜು ಮೌಲ್ಯದ 3 ಚೀಲದಲ್ಲಿದ್ದ 150 ಕೆಜಿ ಅಡಿಕೆಗಳನ್ನು ಕಳ್ಳತನ ಮಾಡಿಕೊಡು ಹೋಗಿರುವುದಾಗಿ ದೂರು ನೀಡಿದ್ದರು.
ಪ್ರಕರಣದ ಪತ್ತೆ ಕುರಿತು ಪೊಲೀಸರು ತಂಡ ರಚನೆ ಮಾಡಿ ಆರೋಪಿತರನ್ನು ಹುಸರಿ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದು ಠಾಣೆಗೆ ತಂದು ವಿಚಾರಣೆ ಮಾಡಿ ಕಳುವು ಮಾಡಿದ ಡಿಕೆಯನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ ಪೆನ್ನೇಕರ್, ಹೆಚ್ಚುವರಿ ಅಧೀಕ್ಷಕ ಬದರಿನಾಥ, ಶಿರಸಿ ಉಪವಿಭಾಗದ ಪೊಲಿಸ್ ಮಾನ್ಯ ಪೊಲೀಸ್ ಉಪಾಧೀಕ್ಷಕ ರವಿ ಡಿ ನಾಯ್ಕ ಹಾಗೂ ಸಿಪಿಐ ರಾಮಚಂದ್ರ ನಾಯಕ ಮಾರ್ಗದರ್ಶನದಲ್ಲಿ ಬನವಾಸಿ ಪೊಲೀಸ್ ಠಾಣೆ ಪಿಎಸ್ಐಗಳಾದ ಹಣಮಂತ ಬಿರಾದಾರ, ಚಂದ್ರಕಲಾ ಪತ್ತಾರ ನೇತೃತ್ವದಲ್ಲಿ ಪ್ರೊಬೇಷ್ಮರಿ ಪಿಎಸ್ಐ ಸುನೀಲ್ ಎಂ., ಮುಖ್ಯಪೇದೆಗಳಾದ ಚಂದ್ರಪ್ಪ ಕೊರವರ, ಸಂತೋಷ್, ಪೇದೆ ಬಸವರಾಜ ಜಾಡರ ಪಾಲ್ಗೊಂಡಿದ್ದರು.
ತಿರುಮಲ ತಿರುಪತಿ ದೇವಸ್ಥಾನಕ್ಕೆ 1.02 ಕೋಟಿ ದೇಣಿಗೆ ನೀಡಿದ ಮುಸ್ಲಿಂ ದಂಪತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ