ಪ್ರಗತಿವಾಹಿನಿ ಸುದ್ದಿ, ತಿರುಪತಿ: ಇಲ್ಲಿನ ತಿರುಮಲ ತಿರುಪತಿ ದೇವಸ್ಥಾನಕ್ಕೆ ಮುಸ್ಲಿಂ ಉದ್ಯಮಿ ದಂಪತಿ 1.02 ಕೋಟಿ ರೂ. ದೇಣಿಗೆ ನೀಡಿದೆ.
ಉದ್ಯಮಿ ಅಬ್ದುಲ್ ಘನಿ ಮತ್ತು ಅವರ ಪತ್ನಿ ಸುಬೀನಾ ಬಾನು ದೇಣಿಗೆ ನೀಡಿದವರು. ಒಟ್ಟು ದೇಣಿಗೆಯಲ್ಲಿ 15 ಲಕ್ಷ ರೂ. ಶ್ರೀ ವೆಂಕಟೇಶ್ವರ ಅನ್ನಪ್ರಸಾದ ಟ್ರಸ್ಟ್‌ಗೆ ಮೀಸಲಾಗಿದ್ದು, ಇದರಲ್ಲಿ ಪ್ರತಿದಿನ ಸಾವಿರಾರು ಭಕ್ತರಿಗೆ ಉಚಿತ ಅನ್ನಸಂತರ್ಪಣೆ ನಡೆಯುತ್ತದೆ. ಉಳಿದ 87 ಲಕ್ಷ ರೂ. ದೇಣಿಗೆಯಲ್ಲಿ ದೇವಸ್ಥಾನದ ಅತಿಥಿ ಗೃಹದ ಅಡುಗೆಮನೆಯಲ್ಲಿ ಪೀಠೋಪಕರಣಗಳು ಮತ್ತು ವಸ್ತುಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ.
ಈ ವೇಳೆ ದಂಪತಿ ಪುತ್ರ ಹಾಗೂ ಪುತ್ರಿ ಕೂಡ ಹಾಜರಿದ್ದರು.
2020 ರಲ್ಲಿ, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅಬ್ದುಲ್ ಘನಿ ದಂಪತಿ ದೇವಾಲಯದ ಆವರಣದಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಿಸಲು ಬಹು ಆಯಾಮದ ಟ್ರ್ಯಾಕ್ಟರ್-ಮೌಂಟೆಡ್ ಸ್ಪ್ರೇಯರ್ ನ್ನು ದಾನ ಮಾಡಿದ್ದ ಈ ದಂಪತಿ, ಈ ಹಿಂದೆ ದೇವಸ್ಥಾನಕ್ಕೆ ತರಕಾರಿ ಸಾಗಿಸಲು 35 ಲಕ್ಷ ರೂ. ವೆಚ್ಚದ ರೆಫ್ರಿಜರೇಟರ್ ಟ್ರಕ್ ಅನ್ನು ಕೊಡುಗೆಯಾಗಿ ನೀಡಿದ್ದರು.
ಸ್ನಾನಗೃಹದಲ್ಲಿ ವಿದ್ಯಾರ್ಥಿನಿ ವಿಡಿಯೊ ಮಾಡಿದ ಹಾಸ್ಟೆಲ್ ಸಿಬ್ಬಂದಿ ಅರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ