Belagavi NewsBelgaum NewsKarnataka News

*ಡೋಲು, ತಾಶೆ ಕುಣಿತ, ಜಯಘೋಷಗಳೊಂದಿಗೆ ಖಡಕ ಗಲ್ಲಿಯ ಗಣೇಶನ ಆಗಮನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಡಕ ಗಲ್ಲಿಯ ರಾಜ ಶ್ರೀ ಗಣೇಶ ಮೂರ್ತಿಯ ಆಗಮನ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ನಡೆಯಿತು. 

ನಗರದ ಧರ್ಮವೀರ ಸಂಭಾಜಿ ಮಹಾರಾಜ ಚೌಕನಲ್ಲಿ ಮಾಜಿ ಶಾಸಕ ಅನಿಲ ಬೆನಕೆ ಅವರಿಂದ ಶ್ರೀ ಗಣೇಶ ಮೂರ್ತಿಯ ಪೂಜೆ ಸಲ್ಲಿಸುವ ಮುಖಾಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು.

Home add -Advt

ಮೆರವಣಿಗೆಯಲ್ಲಿ ಸುಮಾರು 25 ಡೋಲುಗಳು, 10 ತಾಶೆಗಳು ಮತ್ತು 5 ಧ್ವಜಗಳು ಭಾಗವಹಿಸಿದ್ದವು. ಈ ಆಗಮನ ಸಮಾರಂಭದಲ್ಲಿ ಎಸ್.ಪಿ.ಸೌಂಡ, ವಿ.ಸಿ. ಲೈಟ ಸೌಂಡ್ ಸಿಸ್ಟಮ್ ಹಾಗೂ ಹಲಗಿ ವಾದಕ ನಿಪ್ಪಾಣಿ ಹಾಗೂ ಮಣ್ಣೂರಿನ ವಕ್ರತುಂಡ ಡೋಲ ತಾಶಾ ತಂಡಗಳು ಶ್ರೀ ಗಜಾನನನಿಗೆ ಗೌರವ ವಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ ಬೆನಕೆ, ಮುರಗೇಂದ್ರಗೌಡಾ ಪಾಟೀಲ, ರಾಹುಲ ಜಾಧವ, ರಾಜನ ಜಾಧವ. ರಾಜು ಅನಗೋಳಕರ. ನಾಮದೇವ ಬಿರ್ಜೆ ಸೇರಿದಂತೆ ಖಡಕಗಲ್ಲಿ ಪಂಚರು, ಸಲ್ಲಾಗಾರ ಮಂಡಳ, ಹಿರಿಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಗಣೇಶ ಭಕ್ತರು ಉಪಸ್ಥಿತರಿದ್ದರು.

Related Articles

Back to top button