KLE 1099
Beereshwara 15
Home add(4th Anniversary)

ಪ್ರೀಮಿಯರ್ ಲೀಗ್ ಆಡಿದ ಅತ್ಯಂತ ಕಿರಿಯ ಆಟಗಾರನಾಗಿ ದಾಖಲೆ ಸೃಷ್ಟಿಸಿದ ಎಥಾನ್

ಲಿವರ್‌ಪೂಲ್‌ನ ಹಾರ್ವೆ ಎಲಿಯಟ್ ದಾಖಲೆ ಮುರಿದ ಪೋರ.

ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಆರ್ಸೆನಲ್ ಮಿಡ್‌ಫೀಲ್ಡರ್ ಎಥಾನ್ ನ್ವಾನೆರಿ ಭಾನುವಾರ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ  ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಇತಿಹಾಸ  ಸೃಷ್ಟಿಸಿದರು.

ಬ್ರೆಂಟ್‌ಫೋರ್ಡ್ ವಿರುದ್ಧ ಆರ್ಸೆನಲ್ 3-0 ಗೆಲುವಿನ ಸಂದರ್ಭದಲ್ಲಿ ಅವರು ಬದಲಿ ಆಟಗಾರರಾಗಿ ಬಂದಿದ್ದರು.

ಎಥಾನ್ ಅವರ ವಯಸ್ಸು ಇಂದಿಗೆ 15 ವರ್ಷಗಳು, 5 ತಿಂಗಳುಗಳು, 23 ದಿನಗಳು ಮಾತ್ರ.

2019 ರಲ್ಲಿ ಲಿವರ್‌ಪೂಲ್‌ನ ಹಾರ್ವೆ ಎಲಿಯಟ್ 16ವರ್ಷ 30 ದಿನಗಳ ವಯಸ್ಸಿನಲ್ಲಿ ಆಡಿ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ಬರೆದಿದ್ದರು. ಆದರೆ ಈಗ ನ್ವಾನೆರಿ ಅವರು ಎಲಿಯಟ್ ಅವರ  ದಾಖಲೆಯನ್ನು ಮುರಿದಿದ್ದಾರೆ.

ಅಮೆರಿಕದಲ್ಲಿ ಕೋವಿಡ್ ಸಾಂಕ್ರಾಮಿಕ ವಿರಾಮ: ಜೋ ಬಿಡೆನ್

You cannot copy content of this page