Kannada NewsKarnataka News

ನೂತನ ನಗರಸೇವಕರೊಂದಿಗೆ ಭಾನುವಾರ ಸಂಘ ಸಂಸ್ಥೆಗಳ ಸಂವಾದ

ಬೆಳಗಾವಿ ಫೋರಂ ಆಫ್ ಅಸೋಸಿಯೇಶನ್ (FOAB) ಸಹಯೋಗದೊಂದಿಗೆ ಶಾಸಕ ಅಭಯ ಪಾಟೀಲ ಆಯೋಜನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನೂತನವಾಗಿ ಆಯ್ಕೆಯಾಗಿರುವ ಬೆಳಗಾವಿ ಪಾಲಿಕೆಯ ಆಡಳಿತ ಪಕ್ಷದ ಸದಸ್ಯರೊಂದಿಗೆ ಭಾನುವಾರ ಸಂವಾದ ಕಾರ್ಯಕ್ರಮ ನಡೆಯಲಿದೆ.
ಬೆಳಗಾವಿ ಫೋರಂ ಆಫ್ ಅಸೋಸಿಯೇಶನ್ (FOAB) ಸಹಯೋಗದೊಂದಿಗೆ ಶಾಸಕ ಅಭಯ ಪಾಟೀಲ ಮಿಲೋನಿಯಂ ಗಾರ್ಡ್ ನ್ ನಲ್ಲಿ ಭಾನುವಾರ ಬೆಳಗ್ಗೆ 9 ಗಂಟೆಗೆ ಸಂವಾದ ಕಾರ್ಯಕ್ರಮ ಆಯೋಜಿಸಿದ್ದು, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಮತ್ತು ಉತ್ತರ ಶಾಸಕ ಅನಿಲ ಬೆನಕೆ ಪಾಲ್ಗೊಳ್ಳಲಿದ್ದಾರೆ.
ಸುಮಾರು 30ಕ್ಕೂ ಹೆಚ್ಚು ಸಂಘಟನೆಗಳು ಸಂವಾದದಲ್ಲಿ ಪಾಲ್ಗೊಳ್ಳಲಿವೆ. ಬೆಳಗಾವಿ ನಗರದ ಅಭಿವೃದ್ಧಿಗೆ ಹೊಸ ದಿಕ್ಕು ಕಂಡುಕೊಳ್ಳುವ ಹಿನ್ನೆಲೆಯಲ್ಲಿ ಈ ಸಂವಾದ ನಡೆಯಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button