
ಪ್ರಗತಿವಾಹಿನಿ ಸುದ್ದಿ: ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಅಣ್ಣಪ್ಪಸ್ವಾಮಿ ಜತೆ ಪ್ರೀತಿಯ ನಾಟಕವಾಡಿ ಅವರ ಬೆತ್ತಲೆ ವಿಡಿಯೋ ಮಾಡಿ 20 ಲಕ್ಷ ಹಣಕ್ಕಾಗಿ ಯುವತಿ ಬೇಡಿಕೆ ಇಟ್ಟ ಘಟನೆ ನಡೆದಿದೆ.
ಹನಿ ಟ್ರ್ಯಾಪ್ ಕೇಸ್ ಸಂಬಂಧ ನಿಶಾ ಮತ್ತು ಜ್ಯೋತಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ನಿಶಾ, ಅಣ್ಣಪ್ಪನ ಜತೆ ಈ ಹಿಂದೆ ಹಲವು ಲಾಡ್ಜ್‌ಗಳಿಗೆ ಹೋಗಿದ್ದು, ಅಲ್ಲಿ ವಿಡಿಯೋ ಮಾಡಿದ್ದಾಳೆ ಎನ್ನಲಾಗಿದೆ. ಇಬ್ಬರ ನಡುವೆ ಸಾಕಷ್ಟು ಆತ್ಮೀಯತೆ ಇತ್ತು ಎಂಬುದು ಗೊತ್ತಾಗಿದೆ.
ಹಣ ಕೊಡದಿದ್ದರೆ ರೇಪ್ ಕೇಸ್ ಹಾಕಿ, ಅಣ್ಣಪ್ಪನ ಬೆತ್ತಲೆ ವಿಡಿಯೋ ವೈರಲ್ ಮಾಡುವುದಾಗಿ ನಿಶಾ ಬೆದರಿಸಿದ್ದಾಳೆ ಎಂದು ಆರೋಪಿಸಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.