ನದಿ ಪಾತ್ರದ ಗ್ರಾಮಸ್ಥರ ಗಮನಕ್ಕೆ

ನದಿ ಪಾತ್ರದ ಗ್ರಾಮಸ್ಥರ ಗಮನಕ್ಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಧಾರಾಕಾರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಹಿಡಕಲ್ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಒಳಹರಿವು ಹರಿದು ಬರುತ್ತಿದ್ದು. ಇದರಿಂದ ಹಿಡಕಲ್ ಜಲಾಶಯವು ಶೇಕಡಾ ೧೦೦ ರಷ್ಟು ಭರ್ತಿಯಾಗಿದ್ದು, ಜಲಾಶಯಕ್ಕೆ ಬರುವ ನೀರಿನ ಪ್ರಮಾಣ ಗಣನೀಯವಾಗಿ ಏರ ತೊಡಗಿದೆ.
ಜಲಾಶಯದ ಗರಿ? ಮಟ್ಟ ೨೧೭೫.೦೦ ಅಡಿಗಳಿರುತ್ತದೆ. ದಿನಾಂಕ: ೨೪ ಆಗಸ್ಟ್ ೨೦೨೬ ರಂದು ಮುಂಜಾನೆ ೮.೩೦ ಕ್ಕೆ ಜಲಾಶಯದ ಮಟ್ಟ ೨೧೭೪.೮೩೩ ಅಡಿಗಳು ಇದ್ದು ಜಲಾಶಯಕ್ಕೆ ಒಳಹರಿವಿನ ಪ್ರಮಾಣ ೫೨೧೨ ಕ್ಯೂಸೆಕ್ಸ್ ಇದೆ.
ಘಟಪ್ರಭಾ ನದಿಗೆ ಭಾನುವಾರ (ಆ.೨೩) ಮಧ್ಯಾಹ್ನ ೪ ಗಂಟೆಗೆ ಕ್ರೆಸ್ಟ ಗೇಟುಗಳ ಮೂಲಕ ೪೦೦೦ ಕ್ಯೂಸೆಕ್ಸ್ ವರೆಗೆ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುವುದು. ಹಾಗೂ ಜಲಾಶಯದ ಒಳಹರಿವು ಹೆಚ್ಚಾದಂತೆ ಮತ್ತೆ ೫೦೦೦ ಕ್ಯೂಸೆಕ್ಸ್ ವರೆಗೆ ನೀರನ್ನು ನದಿ ಪಾತ್ರಕ್ಕೆ ಹರಿ ಬಿಡಲಾಗುವುದು.
ಆದ್ದರಿಂದ ಘಟಪ್ರಭಾ ನದಿ ಹಾಗೂ ಹಿರಣ್ಯಕೇಶಿ ನದಿಯ ದಡದಲ್ಲಿ ಬರುವ ಎಲ್ಲ ಗ್ರಾಮಗಳ ಜನರು ತಮ್ಮ ಜಾನುವಾರಗಳ ಸಮೇತ ನದಿಯ ಪಾತ್ರದಿಂದ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಕ.ನೀ.ನಿ.ನಿ ಸಿ.ಬಿ.ಸಿ. ಹಿಡಕಲ್ ಡ್ಯಾಮ್ ಉಪ ವಿಭಾಗ ನಂ-೨ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




