Belagavi NewsBelgaum NewsKannada NewsKarnataka NewsLatest

ಸಕ್ಕರೆ ದಾಸ್ತಾನುಗಳ ಮೇಲೆ ನಿರ್ಬಂಧನೆ

ಸಕ್ಕರೆ ದಾಸ್ತಾನುಗಳ ಮೇಲೆ ನಿರ್ಬಂಧನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭಾರತ ಸರ್ಕಾರವು ಸಕ್ಕರೆ ದಾಸ್ತಾನುಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣದ ಉದ್ದೇಶದಿಂದ ಆಗಸ್ ೧, ೨೦೨೬ ರಿಂದ ನವೆಂಬರ್ ೩೦, ೨೦೨೬ ರವರೆಗೆ ಜಾರಿಗೆ ಬರುವಂತೆ ಕೆಲವು ನಿಬಂಧಗಳನ್ನು ವಿಧಿಸಿದ್ದು, ಅವುಗಳನ್ನು ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸಕ್ಕರೆ ವ್ಯಾಪಾರಿಗಳು, ಸಗಟು ವಿತರಕರು, ಸಂಗ್ರಹಣಾ ಕೇಂದ್ರಗಳು ಹಾಗೂ ಸಂಬಂಧಿತ ಎಲ್ಲಾ ಸಂಸ್ಥೆಗಳು ಕೆಳಕಂಡ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಯಾವುದೇ ಸಕ್ಕರೆ ವ್ಯಾಪಾರಿಯು ಸಕ್ಕರೆ ದಾಸ್ತಾನು ಸ್ವೀಕರಿಸಿದ ದಿನಾಂಕದಿಂದ ೩೦ ದಿನಗಳಿಗಿಂತ ಹೆಚ್ಚಿನ ಅವಧಿಗೆ ದಾಸ್ತಾನು ಇರಿಸಿಕೊಳ್ಳಬಾರದು. ಯಾವುದೇ ಸಮಯದಲ್ಲಿ ೪೦೦೦ ಕ್ವಿಂಟಾಲ್ ಗಿಂತ ಹೆಚ್ಚಿನ ಸಕ್ಕರೆ ದಾಸ್ತಾನು ಹೊಂದಿರುವುದು ನಿಷೇಧಿತವಾಗಿದ್ದು, ಈ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.

ಹಾಗೂ ಎಲ್ಲಾ ಸಕ್ಕರೆ ವ್ಯಾಪಾರಿಗಳು ತಮ್ಮ ದಾಸ್ತಾನು ವಿವರಗಳನ್ನು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ Food Stock Portal  https://foodstock.dfpd.gov.in/ ನಲ್ಲಿ ಕಡ್ಡಾಯವಾಗಿ ಘೋಷಿಸಿ, ನಿಯಮಿತವಾಗಿ ನವೀಕರಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button