Belagavi NewsBelgaum NewsCrimeKannada NewsKarnataka NewsLatest

*ಮೂಲ ಮಾಲೀಕರಂತೆ ನಟಿಸಿ ಕೃಷಿ ಜಮೀನು ಮಾರಾಟ: ಆರೋಪಿತನ ಬಂಧನ*

ಮೂಲ ಮಾಲೀಕರಂತೆ ನಟಿಸಿ ಕೃಷಿ ಜಮೀನು ಮಾರಾಟ: ಆರೋಪಿತನ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೂಲ ಮಾಲೀಕರಂತೆ ನಟಿಸಿ ಮತ್ತೊಬ್ಬರ ಹೆಸರಿನಲ್ಲಿದ್ದ ಕೃಷಿ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿ ವಂಚನೆ ಮಾಡಿದ ಆರೋಪದ ಮೇಲೆ 64 ವರ್ಷದ ವ್ಯಕ್ತಿಯನ್ನು ಬೆಳಗಾವಿ ನಗರದ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಆನಂದ ಮೋರೆ (64), ಕಲ್ಲೇಶ್ವರ ಗಲ್ಲಿ, ಸೋನಾರವಾಡಿ, ಖಾನಾಪುರ ತಾಲೂಕು, ಬೆಳಗಾವಿ ಜಿಲ್ಲೆ ಎಂದು ಗುರುತಿಸಲಾಗಿದೆ.
ಈ ಕುರಿತು ಚಂದ್ರಕಾಂತ ರಾಮಚಂದ್ರ ಬಡಮಂಜಿ (64), ಉದ್ಯಮಬಾಗ, ಬೆಳಗಾವಿ ಅವರು ಮಾರ್ಕೆಟ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಅಪರಾಧ ಸಂಖ್ಯೆ 250/2025ರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪೊಲೀಸ್ ಪ್ರಕಟಣೆಯ ಪ್ರಕಾರ, ಉಚ್ಚಗಾಂವ್ ಹೋಬಳಿಯ ಕೊಂಡಾಳ ಗ್ರಾಮದ ವ್ಯಾಪ್ತಿಯಲ್ಲಿರುವ ಸರ್ವೇ ನಂ. 60/*/13ರ ಒಟ್ಟು 1 ಎಕರೆ ಕೃಷಿ ಜಮೀನನ್ನು ಪಿರ್ಯಾದಿದಾರರು ಗಣಪತಿ ಶಂಕರ ಗವಳ ಮತ್ತು ಮಾರುತಿ ದೇವಜ ಗವಳ ಅವರಿಂದ ಖರೀದಿಸಿಕೊಂಡು ತಮ್ಮ ಸ್ವಾಧೀನದಲ್ಲಿಟ್ಟುಕೊಂಡಿದ್ದರು.
ಈ ಜಮೀನನ್ನು ಕಬಳಿಸುವ ಉದ್ದೇಶದಿಂದ ಆರೋಪಿತ ಆನಂದ ಮೋರೆ, 16 ಜುಲೈ 2025ರಂದು ಬೆಳಗಾವಿ ದಕ್ಷಿಣ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಖರೀದಿ ಪತ್ರ ನೋಂದಣಿ ಮಾಡಿ, ಪಿರ್ಯಾದಿದಾರರಿಗೆ ಸೇರಿದ ಕೃಷಿ ಜಮೀನನ್ನು ಬೇರೆಯವರಿಗೆ ಸೇಲ್ ಡೀಡ್ ಮಾಡಿಕೊಟ್ಟು ವಂಚನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನನ್ನು 24 ಆಗಸ್ಟ್ 2026ರಂದು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಮಾರ್ಕೆಟ್ ಉಪವಿಭಾಗದ ಎಸಿಪಿ ಸಂತೋಷ ಸತ್ಯನಾಯಕ ಅವರ ಮಾರ್ಗದರ್ಶನದಲ್ಲಿ, ಮಾರ್ಕೆಟ್ ಠಾಣೆಯ ಪಿಐ ಜೆ.ಎಂ. ಕಾಲಮಿರ್ಚಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಪಿಎಸ್‌ಐಗಳಾದ ಮಣಿಕಂಠ ಪೂಜಾರಿ, ಎಚ್.ಎಲ್. ಕೇರೂರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆರೋಪಿತನ ಬಂಧನ ಹಾಗೂ ಪ್ರಕರಣದ ತನಿಖಾ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.

Home add -Advt

Related Articles

Back to top button