Karnataka News

ಕಬಡ್ಡಿ ಪಂದ್ಯ ಉದ್ಘಾಟಿಸಿದ ಡಾ.ಸೋನಾಲಿ ಸರ್ನೋಬತ್

 ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಖಾನಾಪುರದ ಗುಂಡೇನಟ್ಟಿ ಗ್ರಾಮದ ಬಸವೇಶ್ವರ ಯುವಕ ಸಂಘದ ಆಶ್ರಯದಲ್ಲಿ ಕಬ್ಬಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ ಸೋನಾಲಿ ಸರ್ನೋಬತ್ ಈ ಪಂದ್ಯಾವಳಿ ಉದ್ಘಾಟಿಸಿದರು. ಕಬಡ್ಡಿ ನಮ್ಮ ರಾಷ್ಟ್ರೀಯ ಕ್ರೀಡೆಯಾಗಿದ್ದು, ಇದಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಾಗಿದೆ ಎಂದ ಅವರು, ಪ್ರಥಮ ಬಹುಮಾನಕ್ಕಾಗಿ 25000 ರೂ ನಗದು ಹಣ ನೀಡಿದರು.

ಲಕ್ಷ್ಮೀ ಕೋರಿ, ಅಶ್ವಿನಿ ಹಿಂಡುಲ್ಕರ್, ಮಲ್ಲೇಶಪ್ಪ ತೇಗೂರ, ಪ್ರಕಾಶ ಬಡಿಗೇರ್, ರುದ್ರಗೌಡ ಸೋಮಗೌಡ ಪಾಟೀಲ, (ರೈತ ಸಂಘಟನೆ ಅಧ್ಯಕ್ಷ), ವಿಠ್ಠಲ ಹಿಂಡುಲ್ಕರ್, ಮಡಿವಾಳ ಕಿಲಾರಿ, ಮಡಿವಾಳ ಪಾಟೀಲ, ಆನಂದ್ ರಾಮಜಿ ಪಾಟೀಲ, ಅಣ್ಣಪ್ಪ, ಚವ್ಹಾಣ, ಚವ್ಹಾಣ ಪಾಟೀಲ , ಮಹೇಶ ಹಿಂಡುಲ್ಕರ್ ಉಪಸ್ಥಿತರಿದ್ದರು.
 ಸುತ್ತಮುತ್ತಲಿನ ಗ್ರಾಮಸ್ಥರು ಆ ಭಾಗದ ಸಮಸ್ಯೆಗಳ ಕುರಿತು ಡಾ.ಸೋನಾಲಿ ಸರ್ನೋಬತ್ ಅವರಿಗೆ ಮನವಿ ಸಲ್ಲಿಸಿದರು.

ಶಹಬ್ಬಾಸ್ ಬೆಳಗಾವಿ CEN ಪೊಲೀಸ್!

Home add -Advt

Related Articles

Back to top button