Karnataka News

*ಎಂಬಿಬಿಎಸ್ ಸೀಟ್ ಸಿಗದಿದಕ್ಕೆ ಆತ್ಮಹತ್ಯೆಗೆ ಶರಣಾದ ಯುವತಿ*

ಪ್ರಗತಿವಾಹಿನಿ ಸುದ್ದಿ: ಎಂಬಿಬಿಎಸ್ ಸೀಟ್ ಸಿಗದಿದಕ್ಕೆ ಮನನೊಂದು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟಬೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿಯ ಅನಂತಪುರ ಜಿಲ್ಲೆಯ ರಾಯದುರ್ಗದಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಲಬುರಗಿ ಮೂಲದ ತನುಜಾ ಎನ್ನುವ ವಿದ್ಯಾರ್ಥಿನಿ, ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದಳು. ಆದ್ರೆ, ಸಿಇಟಿಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಎರಡೂ ಬಾರಿಯೂ ಸಹ ಎಂಬಿಬಿಎಸ್ ಸೀಟು ಸಿಕ್ಕಿರಲಿಲ್ಲ. ಇದರಿಂದ ಮನನೊಂದಿದ್ದ ತನುಜಾ, ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಅನಂತಪುರ ಜಿಲ್ಲೆಯ ರಾಯದುರ್ಗದ ಬಳಿ ರೈಲಿನಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾಳೆ.

Home add -Advt

ಎಂಬಿಬಿಎಸ್ ಸೀಟು ಸಿಕ್ಕಿಲ್ಲ ಎಂದು ತನುಜಾ ಹತಾಷೆಗೊಂಡಿದ್ದಳು. ಆದರೂ ಪೋಷಕರು ಮನವೊಲಿಸಿ, ದೃತಿಗೆಡಬೇಡ ಎಂದು ಧೈರ್ಯ ತುಂಬಿ ಎಂಬಿಬಿಎಸ್ ಸೀಟ್ ಸಿಗದಿದ್ದಕ್ಕೆ ಚಿಂತೆ ಮಾಡದೇ ಬಿ.ಎ.ಎಂ.ಎಸ್ ಮಾಡು ಎಂದು ಹೇಳಿ ಮನವೊಲಿಸಿದ್ದರು. ಅದರಂತೆ ತನುಜಾ ಬಿ.ಎ.ಎಂ.ಎಸ್ ಪದವಿಗೆ ಪ್ರವೇಶ ಪಡೆದಿದ್ದಳು. ಆದರೂ ಸಹ ತನುಜಾ ಮನಸ್ಸಲ್ಲಿ ಎರಡೂ ಸಲ ಎಂಬಿಬಿಎಸ್‌ ಸೀಟು ಸಿಗಲಿಲ್ಲವೆಂಬ ನೋವು ಕಾಡುತ್ತಲೇ ಇತ್ತು ಎನ್ನಲಾಗಿದೆ.‌

Related Articles

Back to top button