*ಲೀಸ್ ದರ ಕಡಿತಗೊಳಿಸುವಂತೆ ಯತೀಂದ್ರ ಸಿದ್ದರಾಮಯ್ಯಗೆ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರಾಭಿವೃದ್ಧಿ ಸಚಿವರಾದ ಯತೀಂದ್ರ ಸಿದ್ದರಾಮಯ್ಯ ಅವರು ಮಂಗಳವಾರ ದಿನಾಂಕ 28 ರಂದು ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್‌ನ ಪದಾಧಿಕಾರಿಗಳು ಸಚಿವರನ್ನು ಭೇಟಿ ಮಾಡಿದರು.
ಬೆಳಗಾವಿ ಕಾರ್ಪೋರೇಷನ್ ವತಿಯಿಂದ ಕ್ಷತ್ರೀಯ ಮರಾಠಾ ಪರಿಷತ್ ಒಡೆತನದ ಜಾಗಕ್ಕೆ ಪ್ರತಿ ತಿಂಗಳಿಗೆ ನಿಗದಿಪಡಿಸಿರುವ ಲೀಸ್ ದರ ರೂ. 14,000/- ಅನ್ನು ಪುನಃ ಪರಿಷ್ಕರಿಸಿ, ಈ ಮೊದಲಿನಂತೆ ಪ್ರತಿ ವರ್ಷಕ್ಕೆ ರೂ. 10,000/-ಕ್ಕೆ ನಿಗದಿ ಮಾಡಿಕೊಡುವಂತೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಕುರಿತು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್‌ನ ಎ. ಎಮ್. ಪಾಟೀಲ, ಸಂಜೀವ ಭೋಸಲೆ, ಬಸವರಾಜ ಮ್ಯಾಗೋಟಿ, ಡಿ. ಬಿ. ಪಾಟೀಲ, ಎಸ್. ಎಸ್. ಮೊರೆ, ಬಿಳಗೋಜಿ, ರಾಹೂಲ ಪವಾರ ಹಾಗೂ ಮತ್ತಿತರರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



