Latest

ಇದು ಪುರುಷರ ರಾಜ್ಯ; ಹಾಗಾಗಿ ಅತ್ಯಾಚಾರದಲ್ಲಿ ನಂ.1 ಎಂದ ರಾಜಸ್ಥಾನ ಸಚಿವ

ಪ್ರಗತಿವಾಹಿನಿ ಸುದ್ದಿ; ಜೈಪುರ: ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು, ಸಚಿವರುಗಳು ಮನಬಂದಂತೆ ನಾಲಿಗೆ ಹರಿಬಿಡುತ್ತಿದ್ದು, ಇದೀಗ ರಾಜಸ್ಥಾನದ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್ ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.

ರಾಜಸ್ಥಾನ ಪುರುಷರ ರಾಜ್ಯ. ಹಾಗಾಗಿ ಅತ್ಯಾಚಾರ ಕೇಸ್ ನಲ್ಲಿ ಮೊದಲ ಸ್ಥಾನದಲ್ಲಿ ಇದ್ದೇವೆ ಎಂದು ಸಚಿವರು ನೀಡಿರುವ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ.

Home add -Advt

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಉತ್ತರಿಸಿದ ಸಚಿವ ಶಾಂತಿ ಧರಿವಾಲ್, ರಾಜಸ್ಥಾನದಲ್ಲಿ ಅತ್ಯಾಚಾರಗಳು ಹೆಚ್ಚು ನಡೆಯಲು ಕಾರಣ ಇದು ಪುರುಷರ ನಾಡು. ಹಾಗಾಗಿ ಅತ್ಯಾಚಾರ ಪ್ರಕರಣದಲ್ಲಿ ರಾಜ್ಯ ನಂಬರ್ ಒನ್ ಸ್ಥಾನದಲ್ಲಿದೆ ಎಂದಿದ್ದಾರೆ.

ಸಚಿವರ ಹೇಳಿಕೆಗೆ ಹಲವು ಶಾಸಕರು ನಕ್ಕಿದ್ದು, ಈ ಕುರಿತ ವಿಡಿಯೋ ಹಂಚಿಕೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್, ಸಚಿವರ ಈ ಹೇಳಿಕೆ ನಿಜಕ್ಕೂ ಆಘಾತ ತಂದಿದೆ ಮಾತ್ರವಲ್ಲ ಅಸಹ್ಯ ಹುಟ್ಟಿಸುತ್ತಿದೆ. ಇಂತಹ ಹೇಳಿಕೆ ನೀಡುವ ಮೂಲಕ ಇವರು ಅತ್ಯಾಚಾರವನ್ನೂ ಕಾನೂನುಬದ್ಧಗೊಳಿಸತೊಡಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಎರಡು ರಾಜ್ಯಗಳಲ್ಲಿ ಅತಂತ್ರ ಸಾಧ್ಯತೆ

Related Articles

Back to top button