Latest

ಇದು ರಾಮ ಮಂದಿರ ನಿರ್ಮಿಸಲು ಸಕಾಲವಲ್ಲ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ಇದು ಸರಿಯಾದ ಸಮಯವಲ್ಲ ಎಂದು ಶಂಕರಾಚಾರ್ಯ ಸ್ವರೂಪಾನಂದ್ ಸರಸ್ವತಿ ಸ್ವಾಮೀಜಿಗಳು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಆಗಸ್ಟ್ 5ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಮಾಡಲು ಸಕಲ ಸಿದ್ಧತೆಗಳು ನಡೆದಿವೆ. ಆದರೆ ಇದು ಸರಿಯಾದ ಸಮಯವಲ್ಲ ಎಂದು ಶಂಕರಾಚಾರ್ಯ ಸರಸ್ವತಿ ಅಭಿಪ್ರಾಯ ಪಟ್ಟಿದ್ದಾರೆ.

ನಾನು ಕೂಡ ರಾಮನ ಭಕ್ತ. ಯಾರೇ ರಾಮನ ದೇವಾಲಯವನ್ನು ನಿರ್ಮಿಸಿದರೂ ನಾವು ಸಂತೋಷ ಪಡುತ್ತೇವೆ. ಆದರೆ ಅದಕ್ಕೆ ಸೂಕ್ತ ದಿನಾಂಕ ಮತ್ತು ಶುಭ ಸಮಯವನ್ನು ಆಯ್ಕೆ ಮಾಡಬೇಕು. ಇದರಲ್ಲಿ ರಾಜಕೀಯ ಇರಬಾರದು. ರಾಜಕೀಯದಿಂದಾಗಿ ಹಿಂದೂಗಳ ಸಮಸ್ಯೆಗಳು ಉಲ್ಭಣವಾಗಬಾರದು. ಸಾರ್ವಜನಿಕರ ಹಣದಿಂದ ಈ ದೇವಾಲಯವನ್ನು ನಿರ್ಮಿಸಲಾಗುತ್ತಿದೆ ಅವರ ಅಭಿಪ್ರಾಯವನ್ನೂ ಸಹ ಪಡೆಯಬೇಕು ಎಂದು ಹೇಳಿದ್ದಾರೆ.

ನಾವು ಯಾವುದೇ ಸ್ಥಾನವನ್ನು ಅಥವಾ ರಾಮ ಮಂದಿರದ ಟ್ರಸ್ಟಿಯಾಗಲು ಬಯಸುವುದಿಲ್ಲ. ದೇವಾಲಯವನ್ನು ಸರಿಯಾಗಿ ನಿರ್ಮಿಸಬೇಕು ಮತ್ತು ಸರಿಯಾದ ಸಮಯದಲ್ಲಿ ಅಡಿಪಾಯ ಹಾಕಬೇಕು ಎಂದು ನಾವು ಬಯಸುತ್ತೇವೆ. ಆದರೆ ಇದು ಅಶುಭ ಸಮಯ ಈ ಸಮಯದಲ್ಲಿ ಅಡಿಪಾಯ ಹಾಕುವುದು ಬೇಡ ಎಂದಿದ್ದಾರೆ.

Home add -Advt

ಅಯೋಧ್ಯೆಯಲ್ಲಿ ಆಗಸ್ಟ್ 3ರಿಂದಲೇ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ಆಗಸ್ಟ್ 5ರಂದು ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಿಲನ್ಯಾಸ ನೆರವೇರಿಸಲಿದ್ದಾರೆ.

Related Articles

Back to top button