ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆಯ ರಾಮಮಂದಿರಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಥಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಇನ್ನೇನು ಕೆಲವೇ ಸಮಯದಲ್ಲಿ ಕೋಟಿ ಕೋಟಿ ಭಾರತೀಯರ ಕನಸು ನನಸಾಗಲಿದೆ. ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಆಗಮಿಸಿದ್ದಾರೆ.
ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಬೆಳಿಗ್ಗೆ 10:30ಕ್ಕೆ ಅಯೋಧ್ಯೆ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು ಬಳಿಕ ಅಲ್ಲಿಂದ ರಾಮ ಮಂದಿರದ ಬಳಿಯ ಹೆಲಿಪ್ಯಾಡ್ ತಲುಪಿದ್ದು, ರಾಮ ಮಂದಿರಕ್ಕೆ ಆಗಮಿಸಿ, ಮಂದಿರವನ್ನು ಪರಿಶೀಲಿಸಿದ್ದಾರೆ.
ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಇಡೀ ಭಾರತೀಯ ಚಿತ್ರರಂಗದ ಹಿರಿಯ ನಟ-ನಟಿಯರು, ಗಣ್ಯಾತಿ ಗಣ್ಯರು, ಗಾಯಕರು, ರಾಜಕೀಯ ಮುಖಂಡರು, ಮಠಾಧೀಶರು ಲಕ್ಷಂತರ ಜನರು ರಾಮ ಮಂದಿರಕ್ಕೆ ಹರಿದು ಬಂದಿದೆ. ಖ್ಯಾತ ಗಾಯಕರಿಂದ ರಾಮನಾಮ ಸ್ಮರಣೆ ನಡೆಯುತ್ತಿದೆ. ಇಡೀ ಅಯೋಧ್ಯೆ ರಾಮಜಪದಲ್ಲಿ ಮಿಂದೆದ್ದಿದ್ದು, ದೇಶವೇ ರಾಮಮಯವಾಗಿದೆ.
ಮಧ್ಯಾಹ್ನ 12:5ರಿಂದ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12:29:12:30ರ ಶುಭ ಅಭಿಜಿತ್ ಮುಹೂರ್ತದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಮಧ್ಯಾಹ್ನ 2 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 2:10ಕ್ಕೆ ಕುಬೇರ್ ತಿಲಾಗೆ ಭೇಟಿ ನೀಡಲಿದ್ದಾರೆ.
ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಹಿನ್ನೆಲೆಯಲಿ ಪ್ರಧಾನಿ ನರೇಂದ್ರ ಮೋದಿ ಕಳೆದ 11 ದಿನಗಳಿಂದ ವಿಶೇಶ ವೃತದಲ್ಲಿದ್ದಾರೆ. ಅಲ್ಲದೇ ಜನವರಿ 12ರಿಂದ ಪ್ರತಿದಿನ ಮುಂಜಾನೆ 1 ಗಂಟೆ ವಿಶೇಷ ಮಂತ್ರ ಪಠನ ಅನುಷ್ಠಾನದಲ್ಲಿದ್ದಾರೆ. ಪ್ರತಿದಿನ ನೆಲದ ಮೇಲೆ ಮಲಗುಗುವುದು, ಗೋಪೂಜೆ, ಹಸುಗಳಿಗೆ ಆಹಾರ ನೀಡುವುದು, ರಾಮಾಯಣ ಪಠಣ, ದೇಶದ ಮಹತ್ವದ ದೇವಾಲಯಗಳು, ರಾಮನಿಗೆ ಸಂಬಂಧಿಸಿದ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ.
ಮಹಾರಾಷ್ಟ್ರದ ನಾಸಿಕ್ ನ ರಾಮ್ ಕುಂಡ್, ಶ್ರೀ ಕಾಳರಾಮ್ ದೇವಾಲಯ, ಗುರುವಾಯೂರಿನ ಕೃಷ್ಣ ದೇವಾಲಯ, ಕೇರಳದ ತ್ರಿಪ್ರಯಾರ್ ಶ್ರೀರಾಮಸ್ವಾಮಿ, ಆಂಧ್ರದ ವೀರಭದ್ರ ದೇವಾಲಯ, ತಮಿಳುನಾಡಿನ ತಿರುಚಿರಾಪಳ್ಳಿಯ ಶ್ರೀರಂಗನಾಥಸ್ವಾಮಿ, ರಾಮೇಶ್ವರಂ, ಅರುಲ್ಮಿಗು ರಾಮನಾಥಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ