*ಜನವರಿ 22ರಂದು ದೇಶದ ಪ್ರತಿಯೊಬ್ಬರ ಮನೆಯಲ್ಲಿಯೂ ರಾಮಜ್ಯೋತಿ ಬೆಳಗಿಸಿ; ಪ್ರಧಾನಿ ಮೋದಿ ಕರೆ*

ಪ್ರಗತಿವಾಹಿನಿ ಸುದ್ದಿ; ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನೂತನ ರೈಲು ನಿಲ್ದಾಣ, ವಿಮಾನ ನಿಲ್ದಾಣಗಳನ್ನು ಉದ್ಘಾಟನೆ ಮಾಡಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಜನವರಿ 22ರಂದು ದೇಶದ ಪ್ರತಿಯೊಬ್ಬರ ಮನೆಯಲ್ಲಿಯೂ ದೀಪ ಬೆಳಗಿಸಿ ಎಂದು ಕರೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಜ.22ರಂದು ಐತಿಹಾಸಿಕ ಸುಂದರ ಕ್ಷಣಕ್ಕೆ ದೇಶ ಸಾಕ್ಷಿಯಾಗಲಿದೆ. ಪ್ರತಿಯೊಬ್ಬರ ಮನೆಯಲ್ಲಿಯೂ ಜ.22ರಂದು ರಾಮಜ್ಯೋತಿ ಬೆಳಗಿಸಿ ಎಂದು ಕರೆ ನೀಡಿದರು.
ಭಗವಾನ್ ರಾಮ ಭಕ್ತರು ತೊಂದರೆಯಾಗುವಂತೆ ಯಾರೂ ಮಾಡಬಾರದು. ಜ.22ರಂದು ಎಲ್ಲರೂ ತಮ್ಮ ಮನೆಯಲ್ಲಿ ದೀಪ ಬೆಳಗಿಸಿ. ಅಂದು ಎಲ್ಲರೂ ರಾಮ ಮಂದಿರಕ್ಕೆ ಬರಲು ಅವಕಾಶವಿಲ್ಲ. ಕಾರಣ ಭದ್ರತಾ ಕಾರಣಕ್ಕಾಗಿ. ಎಲ್ಲರೂ ಅಂದು ಕಾರ್ಯಕ್ರಮ ನಡೆಯಲು ಅವಕಾಶ ಮಾಡಿಕೊಡಿ. ಜ.23ರ ಬಳಿಕ ಯಾವಾಗ ಬೆಕಾದರೂ ಅಯೋಧ್ಯೆಗೆ ಭೇಟಿ ನೀಡಿ ಎಂದು ಮನವಿ ಮಾಡಿದರು.
ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರತಿಷ್ಠಾಪನೆ ಆದಾಗ ಎಲ್ಲರೂ ಮನೆಯಲ್ಲಿ ದೀಪಾವಳಿ ಆಚರಿಸಬೇಕು. ಪ್ರತಿಯೊಬ್ಬರ ಮನೆಯಲ್ಲಿಯೂ ದೀಪವನ್ನು ಬೆಳಗಿಸಿ. ಅಯೋಧ್ಯೆಯಲ್ಲಿ ಅದ್ದೂರಿ ಕಾರ್ಯಕ್ರಮಕ್ಕೆ ವರ್ಷಗಳಿಂದ ಸಿದ್ಧತೆ ನಡೆಯುತ್ತಿದೆ. ಯಾವುದೇ ಅಡ್ಡಿಯಾಗದಂತೆ ಎಲ್ಲರೂ ಸಹಕರಿಸಬೇಕು. ಜ.22ರ ಸಮಾರಂಭಕ್ಕೆ ಕೆಲವೇ ಜನರನ್ನು ಆಹ್ವಾನಿಸಲಾಗಿದೆ. ಜ.23ರ ಬಳಿಕ ಅಯೋಧ್ಯೆಗೆ ಎಲ್ಲರೂ ಭೇಟಿ ನೀಡಿ ಎಂದಿದ್ದಾರೆ.