Latest

*ರೈಲು ಅಪಘಾತ; 15ಕ್ಕೂ ಹೆಚ್ಚು ಜಾನುವಾರುಗಳು ಸಾವು*

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ರೈಲು ಡಿಕ್ಕಿಯಾಗಿ 15ಕ್ಕೂ ಹೆಚ್ಚು ಎಮ್ಮೆಗಳು ಮೃತಪಟ್ಟಿರುವ ಘಟನೆ ಮಂಗಳೂರು ಹೊರವಲಯದ ಜೋಕಟ್ಟೆ ಅಂಗರಗುಂಡಿ ಎಂಬಲ್ಲಿ ನಡೆದಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕದ್ರಿ ಅಗ್ನಿಶಾಮಕದಳ ಸಿಬ್ಬಂದಿ, ಹಳಿಯ ಮೇಲಿನ ಜಾನುವಾರುಗಳ ಮೃತದೇಹ ತೆರವುಗೊಳಿಸಿದ್ದಾರೆ. ಕಾರ್ಯಾಚರಣೆ ವೇಳೆ ನಾಲ್ಕು ಎಮ್ಮೆಗಳನ್ನು ರಕ್ಷಿಸಲಾಗಿದೆ.

Home add -Advt

ಕಂಕನಾಡಿ ಕಡೆಯಿಂದ ಎಂಸಿಎಫ್ ಕಡೆಗೆ ಗೂಡ್ಸ್ ರೈಲು ಬರುತ್ತಿತ್ತು. ರೈಲಿನ ಶಬ್ಧಕ್ಕೆ ಭಯಗೊಂಡ ಎಮ್ಮೆಗಳು ರೈಲು ಬ್ರಿಡ್ಜ್ ಮೇಲೆ ಓಡಲಾರಂಭಿಸಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

https://pragati.taskdun.com/m-p-kumaraswamyc-t-ravielection-result/

Related Articles

Back to top button