Kannada NewsKarnataka NewsLatest

*ಪತ್ನಿಗೆ ನೇಣು ಬಿಗಿದು, ವಿಡಿಯೋ ಕಾಲ್ ಮಾಡಿ ಅತ್ತೆ-ಮಾವನಿಗೆ ತೋರಿಸಿದ ಪತಿ* *ರಾಜ್ಯದಲ್ಲಿ ಭೀಕರ ಘಟನೆ*

ಪ್ರಗತಿವಾಹಿನಿ ಸುದ್ದಿ: ಪತಿ ಮಹಾಶಯನೊಬ್ಬ ಪತ್ನಿಗೆ ನೇಣು ಹಾಕಿ ಆಕೆ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿರುವುದನ್ನು ವಿಡಿಯೋ ಕಾಲ್ ಮಾಡಿ ಅತ್ತೆ-ಮಾವನಿಗೆ ತೋರಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಸಾವು-ಬದುಕಿನ ನಡುವೆ ಹೋರಾಡುತ್ತಾ ಕೊನೆಯುಸಿರುವವರೆಗೂ ಪ್ರಾಣ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ಪತ್ನಿ ಸ್ಥಿತಿಯನ್ನು ಕಂಡು ಪತಿ ಸಂಭ್ರಮಿಸಿದ್ದಾನೆ. ಈ ಘೋರ ದೃಶ್ಯವನ್ನು ಅತ್ತೆ – ಮಾವನಿಗೆ ವಿಡಿಯೋ ಕಾಲ್‌ ಮಾಡಿ ತೋರಿಸಿ ತಾನೇ ಹೆಂಡತಿಯನ್ನು ಕೊಲೆಮಾಡಿದ್ದಾಗಿ ಹೇಳಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭಾಗ್ಯಶ್ರೀ ಜಿಗಳೂರು (23) ಪತಿಯಿಂದಲೇ ಕೊಲೆಯಾದ ಮಹಿಳೆ. ಪತಿ ಪ್ರವೀಣ್ ಜಿಗಳೂರು ಪತ್ನಿಯನ್ನು ಕೊಂದ ಆರೋಪಿ.

ಪತ್ನಿಗೆ ಅನೈತಿಕ ಸಂಬಂಧವಿರಬಹುದು ಎಂಬ ಸಂಶಯಕ್ಕೆ ಈ ಕೃತ್ಯವೆಸಗಿದ್ದಾನಂತೆ. ಪತ್ನಿ ಮೇಲೆ ಅನುಮಾನಗೊಂಡು ಪದೇ ಪದೇ ಜಗಳವಾಡುತ್ತಿದ್ದನಮ್ತೆ. ಇದರಿಂದ ಬೇಸತ್ತ ಪತ್ನಿ ಭಾಗ್ಯಶ್ರೀ,
ಎರಡು ತಿಂಗಳ ಹಿಂದೆ ತವರುಮನೆ ಮಹಾಲಿಂಗಪುರಕ್ಕೆ ಹೋಗಿದ್ದಳು. ಎರಡು ತಿಂಗಳ ಬಳಿಕ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ನಂಬಿಸಿ ಗಲಗಲಿಗೆ ಕರೆತಂದಿದ್ದ . ನಿನ್ನೆಯಷ್ಟೇ ಪತ್ನಿಯನ್ನು ಮನೆಗೆ ಕರೆತಂದವನೇ ಆಕೆಗೆ ಬಡಿಗೆಯಿಂದ ಹೊಡೆದು ಹಿಂಸಿಸಿದ್ದಲ್ಲದೇ ನೇಣು ಹಾಕಿ ಕೊಲೆ ಮಾಡಿದ್ದಾನೆ.

Home add -Advt

ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.

Related Articles

Back to top button