Kannada NewsKarnataka NewsLatest

ಬೈಲಹೊಂಗಲ: ಪತ್ನಿಯ ಕತ್ತು ಸೀಳಿ ಹತ್ಯೆಗೈದು ಠಾಣೆಗೆ ಬಂದು ಶರಣಾದ ಪತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪತ್ನಿಯ ಕತ್ತು ಸೀಳಿ ಕೊಲೆಗದ ವೃದ್ಧ ಪತಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಬುಡರಕಟ್ಟಿ ಗ್ರಾಮದ ದಂಪತಿ ಪತ್ನಿಯ ತವರುಮನೆ ಖೋದಾನಪುರ ಗ್ರಾಮಕ್ಕೆ ಬಂದಿದ್ದಾಗ ಘಟನೆ ನಡೆದಿದೆ.  ರುದ್ರವ್ವ ಚನ್ನಬಸಪ್ಪ ಅಡಕಿ (55) ಕೊಲೆಯಾದವಳು.  ಪತಿ ಚನ್ನಬಸಪ್ಪ ಸಂಗಪ್ಪ ಅಡಕಿ (62) ಕೊಲೆಗದಾತ.
ಗಂಡ -ಹೆಂಡತಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಶುಕ್ರವಾರ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಯಿತು.
 ಕೊಲೆ ಮಾಡಿದ ನಂತರ ಚನ್ನಬಸಪ್ಪ ದೊಡವಾಡ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
https://pragati.taskdun.com/latest/21-ias-officers-transferd/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button