Latest

ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ; ಎಲ್ಲಾ 12 ಆರೋಪಿಗಳು ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಎಲ್ಲಾ 12 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಇಬ್ಬರು ಆರೋಪಿಗಳನ್ನು ಶಿವಮೊಗ್ಗದಲ್ಲಿಯೇ ಬಂಧಿಸಲಾಗಿದ್ದರೆ, ಮೂವರು ಆರೋಪಿಗಳು ತಲೆ ಮರೆಸಿಕೊಳ್ಳಲು ಬೆಂಗಳೂರಿಗೆ ಬಂದಿದ್ದ ವೇಳೆ ಬಂಧಿಸಲಾಗಿದೆ. ಹರ್ಷ ಹತ್ಯೆ ಕೇಸ್ ಸಂಬಂಧ ಒಟ್ಟು 12 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

Home add -Advt

ಹರ್ಷನ ಹತ್ಯೆಗಾಗಿ ಆರೋಪಿಗಳು ಹಲವು ದಿನಗಳ ಹಿಂದೆ ಸಂಚು ರೂಪಿಸಿದ್ದರು, ಆತನ ಚಲನವಲನಗಳನ್ನು ಬಹಳ ದಿನಗಳಿಂದ ಗಮನಿಸಿದ್ದರಲ್ಲದೇ ಭಾನುವಾರ ಬೆಳಿಗ್ಗೆಯಿಂದಲು ಓರ್ವ ವ್ಯಕ್ತಿ ಹರ್ಷನನ್ನು ಹಿಂಬಾಲಿಸಿದ್ದ. ರಾತ್ರಿ ಹರ್ಷ ಒಬ್ಬನೆ ತೆರಳುತ್ತಿರುವುದನ್ನು ಗಮನಿಸಿ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

 

Related Articles

Back to top button