
ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ನಲ್ಲಿ ಬೆಂಗಳೂರು ಟೆಕ್ ಸಮಿಟ್ 2025 ‘ಫ್ಯೂಚರೈಸ್ ‘ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಚಾಲನೆ ನೀಡಿದರು.

ಸಚಿವರಾದ ಪ್ರಿಯಾಂಕ್ ಖರ್ಗೆ, ಎಂ.ಬಿ. ಪಾಟೀಲ್, ನಾರ್ವೆ ಆರೋಗ್ಯ ಸಚಿವ ಜಾನ್ ಕ್ರಿಶ್ಚಿಯನ್ ವೆಸ್ಟರ್, ಜರ್ಮನಿ ಭಾವರೈನ್ ಸ್ಟೇಟ್ ಪಾರ್ಲಿಮೆಂಟ್ ಪ್ರೆಸಿಡೆಂಟ್ ಇಲ್ಸ್ ಐಗ್ನರ್, ಪೋಲೆಂಡ್ ಡೆಪ್ಯೂಟಿ ಮಿನಿಸ್ಟರ್ ರಾಫೆಲ್ ರೋಸಿನ್ಸ್ಕಿ, ಮೆಲ್ಬೊರ್ನ್ ಮೇಯರ್ ನಿಕೋಲಸ್ ರೀಸ್, ಶಾಸಕ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣ, ಬಯೋಕಾನ್ ಮುಖ್ಯಸ್ಥೆ ಡಾ. ಕಿರಣ್ ಮಾಜೂಂದಾರ್ ಷಾ, ಕರ್ನಾಟಕ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ಇಸ್ರೋ ಮಾಜಿ ಮುಖ್ಯಸ್ಥ ಡಾ. ಎ.ಎಸ್. ಕಿರಣ್ ಕುಮಾರ್, ಸಾಫ್ಟ್ ವೇರ್ ಟೆನ್ನಾಲಜಿ ಪಾರ್ಕ್ ನಿರ್ದೇಶಕ ಅರವಿಂದ್ ಕುಮಾರ್, ಕರ್ನಾಟಕ ಡಿಜಿಟಲ್ ಎಕಾನಾಮಿ ಮುಖ್ಯಸ್ಥ ಬಿ.ವಿ. ನಾಯ್ಡು, ಸಂಜಯ್ ತ್ಯಾಗಿ ಮತ್ತಿತರರು ಉಪಸ್ಥಿತರಿದ್ದರು.




