Latest

ತಂದೆಗೆ ಕಾಲ್ ಗರ್ಲ್ಸ್, ವೇಶ್ಯೆಯರ ಸಹವಾಸ; ಅಪ್ಪನ ದುರ್ವರ್ತನೆ ಬಗ್ಗೆ ದೂರು ನೀಡಿದ್ದ ಮೃತ ಮಗ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಒಂದೇ ಕುಟುಂಬದ ಐವರ ಸಾವು ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದ್ದು, ನಿನ್ನೆ ಶಂಕರ್ ಮನೆಯಲ್ಲಿ ಸಿಕ್ಕ ಮೂರು ಡೆತ್ ನೋಟ್ ನಲ್ಲಿ ಶಂಕರ್ ವಿರುದ್ಧ ಹಲವು ಆರೋಪ ಮಾಡಲಾಗಿತ್ತು. ಇದೀಗ ಮೃತ ಪುತ್ರ ಮಧುಸಾಗರ್ ತನ್ನ ತಂದೆ ವಿರುದ್ಧ ಈ ಹಿಂದೆಯೇ ಪೊಲಿಸ್ ಠಾಣೆಯಲ್ಲಿ ದೂರು ನೀಡಿದ್ದ ಎಂಬುದು ಇದೀಗ ಬಯಲಾಗಿದೆ.

ತನ್ನ ತಂದೆ ಶಂಕರ್ ದುರ್ವರ್ತನೆಯಿಂದ ಕೂಡಿದವರು. ಹೊರ ಜಗತ್ತಿಗೆ ಮುಖವಾಡ ಹಾಕಿ ಬದುಕುತ್ತಿದ್ದಾರೆ. ಆತ ತುಂಬಾ ಸ್ವಾರ್ಥಿ. ತನ್ನ ತಂದೆಗೆ ಅನೈತಿಕ ಸಂಬಂಧವಿದೆ. ಕಾರ್ಲ್ ಗರ್ಲ್ಸ್, ವೇಶ್ಯೆಯರ ಸಹವಾಸವಿದೆ. ರಾಜಾಜಿನಗರದ ಕಚೇರಿಯಲ್ಲಿಯ್ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಆರೋಪಿಸಿ ನಾಲ್ವರು ಮಹಿಳೆಯರ ಹೆಸರನ್ನೂ ಉಲ್ಲೇಖಿಸಿದ್ದ.

Home add -Advt

ತಂದೆ ದುರ್ವರ್ತನೆ ಬಗ್ಗೆ ಅಮ್ಮನಿಗೂ ಗೊತ್ತಿತ್ತು. ತನ್ನ ತಾಯಿ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದ. ಆಕೆಯನ್ನು ಮನೆ ಕೆಲಸದವಳಂತೆ ನಡೆಸಿಕೊಳ್ಳುತ್ತಿದ್ದ. ನನ್ನ ಆರೋಪದ ಬಗ್ಗೆ ವಾಟ್ಸಾಪ್ ಸ್ಕ್ರೀನ್ ಶಾಟ್ ಸಾಕ್ಷಿಯಿದೆ ಎಂದು ಈ ಹಿಂದೆಯೇ ಮಧುಸಾಗರ್ ತನ್ನ ತಂದೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಆದರೆ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆದು ಬುದ್ಧಿವಾದ ಹೇಳಿ ರಾಜೀ ಮಾಡಿಸಿಕಳಿಸಿದ್ದರು ಎನ್ನಲಾಗಿದೆ.
ಒಂದೇ ಕುಟುಂಬದ ಮೂವರ ಆತ್ಮಹತ್ಯೆ

Related Articles

Back to top button