National

*ಸಂಸದನನ್ನು ಹತ್ಯೆಗೈದು; ದೇಹವನ್ನು ತುಂಡು ತುಂಡಾಗಿ ಮಾಡಿ, ಚರ್ಮ ಸುಲಿದು ಫ್ರಿಜ್ಡ್ ನಲ್ಲಿಟ್ಟ ಹಂತಕರು*

ಪ್ರಗತಿವಾಹಿನಿ ಸುದ್ದಿ: ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಮ್ ಅನಾರ್ ಅವರನ್ನು ಕೋಲ್ಕತ್ತಾದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಕ್ರಮ ವಲಸಿಗರಿಂದಲೇ ಕೊಲೆ ನಡೆದಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

Related Articles

ಕೋಲ್ಕತ್ತಾಗೆ ಆಗಮಿಸಿದ್ದ ಸಂಸದ ಅನ್ವರುಲ್ ಅಜೀಮ್ ಎರಡು ದಿನಗಳಲ್ಲೇ ನಾಪತ್ತೆಯಾಗಿದ್ದರು. ಮೇ 14ರಂದು ಏಕಾಏಕಿ ನಾಪತ್ತೆಯಾಗಿದ್ದ ಅನ್ವರ್ ಅವರನ್ನು ಅಪಾರ್ಟ್ ಮೆಂಟ್ ಒಂದರಲ್ಲಿ ಬಾಂಗ್ಲಾ ಅಕ್ರಮ ವಲಸಿಗರು ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಅನ್ವರುಲ್ ಅಜೀಮ್, ಬಾಂಗ್ಲಾದ ಸಂಸದ ಮಹಿಳೆಯೊಬ್ಬರು ಹಾಕಿದ ಹನಿಟ್ರ್ಯಾಪ್ ಬಲೆಗೆ ಸಿಲುಕಿದ್ದರು ಎನ್ನಲಾಗಿದೆ. ಕೋಲ್ಕತ್ತಾದ ನ್ಯೂಟೌನ್ ಫ್ಲ್ಯಾಟ್ ಗೆ ಹೋಗಿದ್ದ ಅನ್ವರುಲ್ ಅಜೀಮ್, ಭೀಕರವಾಗಿ ಕೊಲೆಯಾಗಿದ್ದಾರೆ. ಕೊಲೆ ಬಳಿಕ ಸಂಸದರ ದೇಹವನ್ನು ಹಲವು ತುಂಡುಗಳನ್ನಾಗಿ ಮಾಡಿ, ಚರ್ಮ ಸುಲಿಯಲಾಗಿದೆ. ಮೂಳೆ, ಮಾಂಸಗಳನ್ನು ಬೇರ್ಪಡಿಸಿ ಪ್ರಿಡ್ಜ್ ನಲ್ಲಿ ಇಡಲಾಗಿತ್ತು. ದೇಹ ಹೆಚ್ಚು ಕೊಳೆಯದಂತೆ ಮಾಡಲು ಅರಿಷಿಣ ಪುಡಿ ಹಚ್ಚಲಾಗಿತ್ತು. ಬಳಿಕ ದೇಹದ ಭಾಗಗಳನ್ನು ಟ್ರಾಲಿ ಬ್ಯಾಗ್ ನಲ್ಲಿಟ್ಟು ತೆಗೆದುಕೊಂಡು ಹೋಗಿ ಕೋಲ್ಕತ್ತಾದ ವಿವಿಧ ಭಾಗಗಳಲ್ಲಿ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Home add -Advt

ಅಕ್ರಮ ವಲಸಿಗ ಯುಎಸ್ ಪ್ರಜೆಯೊಬ್ಬ ಈ ಕೊಲೆಯ ಮಾಸ್ಟರ್ ಮೈಂಡ್ ಎನ್ನಲಾಗಿದ್ದು, ಆತನ ಸೂಚನೆ ಮೇರೆಗೆ ನಾಲ್ವರು ಸಂಸದರ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ತನಿಖೆ ಮುಂದಿವರೆಸಿದ್ದಾರೆ.


Related Articles

Back to top button