Kannada NewsLatestNational

*ಏರ್ ಇಂಡಿಯಾ ವಿಮಾನ ದುರಂತಕ್ಕೆ ಟರ್ಕಿ ಕಾರಣ: ರಾಮದೇವ ಬಾಬಾ*

ಪ್ರಗತಿವಾಹಿನಿ ಸುದ್ದಿ: ಗುಜರಾತ್ ನಲ್ಲಿ ನಡೆದ ವಿಮಾನ ದುರಂತದಲ್ಲಿ 241 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ವಿಮಾನ ಹಾಸ್ಟೆಲ್ ಮೇಲೆ ಬಿದಿದ್ದರಿಂದ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಅಪಘಾತದ ಕಾರಣ ತಿಳಿಯಲು ಐದು ತಂಡಗಳು ಕೆಲಸ ಮಾಡುತ್ತಿದೆ. ಇದರ ಮಧ್ಯೆ ರಾಮದೇವ್ ಬಾಬಾ ಹೊಸ ಬಾಂಬ್ ಸಿಡಿಸಿದ್ದಾರೆ. 

ಗುಜರಾತನ್ ಅಹಮದಾಬಾದ್ ನಲ್ಲಿ ಗುರುವಾರ ಏರ್ ಇಂಡಿಯಾ ವಿಮಾನ ಅಪಘಾತವಾಗಲು ಟರ್ಕಿ ಕೈವಾಡ ಇದೆ. ಸೂಕ್ತ ತನಿಖೆ ನಡೆಸಬೇಕು. 

Home add -Advt

ಏರ್ ಇಂಡಿಯಾ ವಿಮಾನಗಳ ಸೇವೆ ಹಾಗೂ ನಿರ್ವಹಣೆಯನ್ನು ಟರ್ಕಿ ಕಂಪನಿ ನೋಡಿಕೊಳ್ಳುತ್ತಿದೆ. ಅಪಘಾತದ ಹಿಂದೆ ದೊಡ್ಡ ಷಡ್ಯಂತ್ರ ಇರಬಹುದು ಎಂದು ಅನಿಸುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡು ತನಿಖೆ ನಡೆಸಬೇಕು ಎಂದಿದ್ದಾರೆ.

ಆಪರೇಷನ್‌ ಸಿಂಧೂರ್ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿತ್ತು. ಉದ್ವಿಗ್ನತೆಯ ಸಂದರ್ಭದಲ್ಲಿ, ಟರ್ಕಿ ಪಾಕಿಸ್ತಾನದ ಪರವಾಗಿ ನಿಲ್ಲುತ್ತಿತ್ತು. ಅಹಮದಾಬಾದ್ ನಲ್ಲಿ ನಡೆದ ವಿಮಾನ ಅಪಘಾತ ಟರ್ಕಿಗೆ ಸಹಾಯ ಮಾಡಿರಬಹುದು..? ಅನುಮಾನವಿದೆ ಎಂದಿದ್ದಾರೆ.

ಭಾರತವು ವಾಯುಪ್ರದೇಶದ ಮೇಲೂ ಗುರಿಯಿಡಬೇಕು. ಟರ್ಕಿಯ ಒಂದು ಕಂಪನಿಯು ವಿಮಾನದ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ವಿಮಾನವನ್ನು ಟರ್ಕಿಶ್ ಕಂಪನಿ ಪಹತ್ ನೋಡಿಕೊಂಡಿತ್ತು. ವಾಯುಪ್ರದೇಶದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಭಾರತವು ವಿದೇಶಿ ಹಸ್ತಕ್ಷೇಪವನ್ನು ನಿಲ್ಲಿಸಬೇಕಾಗುತ್ತದೆ ಎಂದು ರಾಮದೇವ್ ಬಾಬಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Related Articles

Back to top button