Belagavi NewsBelgaum NewsKannada NewsKarnataka News

*ದನ ಮೇಯಿಸುತ್ತಿದ್ದ ರೈತನ ಮೇಲೆ ಕರಡಿ ದಾಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಣಕುಂಬಿ ಚೆಕ್ ಪೋಸ್ಟ್ ಬಳಿ ನಡೆದಿದೆ.

ದಶರಥ ವರಂಡಿಕರ (60) ಗಾಯಗೊಂಡ ರೈತ. ಕರಡಿ ದಾಳಿಯ ಭೀಕರತೆಗೆ ಅವರ ಮುಖವೇ ಸಂಪೂರ್ಣ ಹರಿದುಹೋಗಿದ್ದು, ಕಿವಿ, ಕಣ್ಣು ತುಟಿಗಳು ಜೋತಾಡುತ್ತಿವೆ.

Home add -Advt

ದಶರಥ ವರಂಡಿಕರ ಅವರು ಇಂದು ದನ ಮೇಯಿಸಲು ಅಡವಿಗೆ ಹೋಗಿದ್ದರು. ದನಗಳನ್ನು ಅರಣ್ಯದಂಚಿನಲ್ಲಿ ಮೇಯಲು ಬಿಟ್ಟು ವಾಪಸ್ ಬರುತ್ತಿದ್ದಾಗ ಕರಡಿ ಹಠಾತ್ತಾಗಿ ದಾಳಿ ನಡೆಸಿತ್ತು. 

ರೈತನ ಕೂಗಾಟ, ಚೀರಾಟ ಕೇಳಿ ಸ್ಥಳೀಯರು ಧಾವಿಸಿ ರಕ್ಷಿಸಿದ್ದಾರೆ. ಗಾಯಾಳುವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಖಾನಾಪುರ ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

https://pragativahini.com/i-never-said-that-the-state-government-does-not-have-money-home-

Related Articles

Back to top button