Kannada NewsLatest

ಬೆಳಗಾವಿ: ಮತಗಟ್ಟೆಯಲ್ಲೇ ಸಾವನ್ನಪ್ಪಿದ ಹಿರಿಯ ಮಹಿಳೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮತದಾನ ಮಾಡಲು ಬಂದ ಹಿರಿಯ ಮಹಿಳೆಯೊಬ್ಬರು ಮತಗಟ್ಟೆಯಲ್ಲೇ ಸಾವನ್ನಪ್ಪಿದ್ದಾರೆ.

ಪಾರವ್ವ ಈಶ್ವರಪ್ಪ ಸಿದ್ನಾಳ (70) ಮೃತಪಟ್ಟವರು. ಅವರು ತಾಲೂಕಿನ ಯರಝರವಿ ಗ್ರಾಮದ ಮತಗಟ್ಟೆ ಸಂಖ್ಯೆ 40ರಲ್ಲಿ ಮತದಾನ ಮಾಡಲು ಬಂದಿದ್ದು ಮತ ಚಲಾಯಿಸುವ ಮುನ್ನವೇ ಕುಸಿತಕ್ಕೊಳಗಾಗಿ ಮೃತಪಟ್ಟರು.

ರಕ್ತದ ಒತ್ತಡದ ಕುಸಿತದಿಂದ ಸಾವು ಸಂಭವಿಸಿರುವುದಾಗಿ ಹೇಳಲಾಗಿದೆ. ಅವರ ಕುಟುಂಬದವರಿಗೆ ಶವ ಹಸ್ತಾಂತರಿಸಲಾಗಿದ್ದು ಸ್ವಗ್ರಾಮಕ್ಕೆ ಸಾಗಿಸಲಾಗಿದೆ.

Home add -Advt
https://pragati.taskdun.com/minister-shasikala-jolle-mp-annasaheb-jolle-casted-vote-with-family-members/

https://pragati.taskdun.com/youngsters-started-voting-with-gomata-puja/

https://pragati.taskdun.com/old-woman-outraged-protesting-in-front-of-the-polling-station/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button