Latest

ಮೂರು ಮದುವೆಯಾಗಿದ್ದ ವೈದ್ಯನಿಂದ ನಾಲ್ಕನೇ ಮದುವೆಗೆ ಸಿದ್ಧತೆ

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಅದಾಗಲೇ ಮೂರು ಮದುವೆಯಾಗಿದ್ದ ವೈದ್ಯನೊಬ್ಬ ನಾಲ್ಕನೇ ಮದುವೆ ಸಿದ್ಧತೆ ನಡೆಸುತ್ತಿದ್ದಾಗ ಮೂರನೇ ಪತ್ನಿ ಪತಿಯ ಕಳ್ಳಾಟವನ್ನು ಬಯಲು ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ನಾಲ್ಕನೇ ಮದುವೆಯನ್ನು ತಡೆಯಬೇಕೆಂದು ಪತಿಯ ವಿರುದ್ಧ ಮೂರನೇ ಪತ್ನಿ ನೀತಾ ವಿಜಯಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Home add -Advt

ಡಾ.ಮಂಜುನಾಥ್ ನಾಲ್ಕನೇ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಮಂಜುನಾಥ್ ಸದ್ಯ ಆನೇಕಲ್ ತಾಲೂಕಿನ ಇಂದಲವಾಡಿ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಈಗ ಧಾರವಾಡ ಮೂಲದ ಯುವತಿ ಜೊತೆ ಮದುವೆಗೆ ಸಿದ್ಧತೆ ನಡೆಸಿದ್ದಾನೆ. ನೀತಾ ಸದ್ಯ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ.

ಮೊದಲ ಪತ್ನಿಗೆ ಒಂದು ಗಂಡು ಮಗುವಿದ್ದು, ಎರಡನೇ ಪತ್ನಿಗೆ ಹಣ ನೀಡಿ ರಾಜಿ ಮಾಡಿಕೊಂಡಿದ್ದಾನೆ. ನನಗೆ ಸುಳ್ಳು ಹೇಳಿ ಮಂಜುನಾಥ್ ಮದುವೆ ಆಗಿದ್ದ. ಆರಂಭದ ಎರಡು ವರ್ಷ ಚೆನ್ನಾಗಿಯೇ ಇದ್ದ ಪತಿ ನನ್ನಿಂದ ದೂರವಾದನು. ಹೀಗಾಗಿ ಪತಿ ವಿರುದ್ಧ ದೂರು ದಾಖಲಿಸಿದ್ದೇನೆ. ಡಿವೋರ್ಸ್, ವಿಧವೆಯರನ್ನು ಟಾರ್ಗೆಟ್ ಮಾಡಿ ಮಂಜುನಾಥ್ ಮದುವೆ ಆಗುತ್ತಾನೆ ಎಂದು ಮೂರನೇ ಪತ್ನಿ ನೀತಾ ಆರೋಪಿಸಿದ್ದಾರೆ.

Related Articles

Back to top button