Latest

ವಿದ್ಯುತ್ ತಂತಿ ತಗುಲಿ ಅಣ್ಣ-ತಮ್ಮ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಕೋಲಾರ: ವಿದ್ಯುತ್ ತಂತಿ ಸ್ಪರ್ಶಿಸಿ ಅಣ್ಣ-ತಮ್ಮ ಇಬ್ಬರೂ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಕೆ ಜಿಎಫ್ ನ ಲಕ್ಷ್ಮಿ ಸಾಗರ ಗ್ರಾಮದಲ್ಲಿ ನಡೆದಿದೆ.

30 ವರ್ಷದ ರಮೆಶ್ ಹಾಗೂ 28 ವರ್ಷದ ಮುರಳಿ ಮೃತ ಸಹೋದರರು. ಲಕ್ಷ್ಮೀಸಾಗರ ಗ್ರಾಮದ ನಿವಾಸಿಗಳಾಗಿರುವ ಸಹೋದರರು ತೋಟಕ್ಕೆ ಹೋಗಿದ್ದಾಗ ದುರಂತ ಸಂಭವಿಸಿದೆ.

Home add -Advt

ತೋಟಕ್ಕೆ ಅಳವಡಿಸಿದ್ದ ಸೌರ ಬೇಲಿ ಮೇಲೆ ವಿದ್ಯುತ್ ತಂತಿ ಬಿದ್ದಿತ್ತು. ಸೌರ ಬೇಲಿ ಮುಟ್ಟಿದಾಗ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ಸ್ಥಳದಲ್ಲೇ ಅಣ್ಣ-ತಮ್ಮ ಇಬ್ಬರೂ ಕೊನೆಯುಸಿರೆಳೆದಿದ್ದಾರೆ.

ರಾಬರ್ಟ್ ಸನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಕತ್ತಿದ್ದರೆ ಸಿದ್ದರಾಮಯ್ಯ ಮತ್ತೆ ಬಾದಾಮಿಯಲ್ಲಿ ಸ್ಪರ್ಧಿಸಲಿ; ಸವಾಲು ಹಾಕಿದ ಬಿಜೆಪಿ ರಾಜ್ಯಾಧ್ಯಕ್ಷ

https://pragati.taskdun.com/politics/nalin-kumar-kateelsiddaramaiahh-d-kumaraswamy/

Related Articles

Back to top button