Belagavi NewsBelgaum NewsKannada NewsKarnataka NewsLatest

*BREAKING: ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ವೇಳೆ ತಪ್ಪಿದ ಭಾರಿ ಅನಾಹುತ*

ಸಚಿವ ಸತೀಶ್ ಜಾರಕಿಹೊಳಿ ಪರೇಡ್ ವೀಕ್ಷಣೆಗೆ ತೆರಳುವ ವಾಹನದಲ್ಲಿ ಡೀಸೆಲ್ ಸೋರಿಕೆ

ಪ್ರಗತಿವಾಹಿನಿ ಸುದ್ದಿ: ಕುಂದಾನಗರಿ ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ‌ ಪರೇಡ್ ವೀಕ್ಷಣೆಗೆ ತೆರಳುವ ಜೀಪ್ ಡಿಸೇಲ್ ಸೋರಿಕೆಯಾದ ಪರಿಣಾಮ ದೊಡ್ಡ ಅನಾಹುತ ತಪ್ಪಿದ ಘಟನೆ ಶನಿವಾರ ನಡೆದಿದೆ.

ಧ್ವಜಾರೋಹಣ ಬಳಿಕ ಪರೇಡ್ ವೀಕ್ಷಣೆಗೆ ಹೋಗುವಾಗ ಸಚಿವರು ಜೀಪ್ ಏರುವ ಮುನ್ನ ಡಿಸೇಲ್ ಸೋರಿಕೆಯಾಗಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ಹೊತ್ತದಂತೆ ಫೈಯರ್ ಕಂಟ್ರೋಲ್ ಗ್ಯಾಸ್ ಸಿಂಪಡಿಸಿ, ಜೀಪ್ ತಳ್ಳಿಕೊಂಡು ಮೈದಾನದಿಂದ ಹೊರ ತೆಗೆದುಕೊಂಡು ಹೋದರು.

ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣಕ್ಕೂ ಮುನ್ನ ತಾಯಿ ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿದ ಸಚಿವ ಸತೀಶ್ ಜಾರಕಿಹೊಳಿ‌ ಗೆ ಶಾಸಕ ಆಸೀಫ್ ಸೇಠ್, ಡಿಸಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಸಿಂಧೆ, ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಭಾಗಿಯಾಗಿದ್ದರು.

Home add -Advt

ಪರಿವೀಕ್ಷಣೆ ಇಲ್ಲದೇ ಆಕರ್ಷಕ ಪಥಸಂಚನ ಮಾತ್ರ ವೀಕ್ಷಣೆ ಆಗಿಮಿಸದ್ದ ಸಚಿವ ಸತೀಶ್ ಪೊಲೀಸರು, ಕೆಎಸ್‌ಆರ್‌ಪಿ ತುಕಡಿ, ಎನ್‌ಸಿಸಿ, ಸ್ಕೌಟ್ಸ್ ಸೇರಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚನ‌ ನಡೆಸುವ ಮುನ್ನ ಘಟನೆ ನಡೆದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳದೆ ಜಿಲ್ಲಾಡಳಿತದ ಎಡವಟ್ಟೆ ಈ ಘಟನೆಗೆ ಕಾರಣವಾಗಿದೆ.‌

Related Articles

Back to top button