Film & EntertainmentKarnataka News

*ನಟ ಕಮಲ್ ಹಾಸನ್ ವಿರುದ್ಧ ಸಿಡಿದೆದ್ದ ಕನ್ನಡಿಗರು; ಬೆಳಗಾವಿಯಲ್ಲಿಯೂ ಕರವೇ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಬಹುಭಾಷ ನಟ ಕಮಲ್ ಹಾಸನ್ ಕನ್ನಡ ಹುಟ್ತಿದ್ದು ತಮಿಳಿನಿಂದ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಥಗ್ ಲೈಫ್ ಇವೆಂಟ್ ಕಾರ್ಯಕ್ರಮದಲ್ಲಿ ನಟ ಶಿವರಜ್ ಕುಮಾರ್ ಅವರ ಎದುರಲ್ಲೇ ನಟ ಕಮಲ್ ಹಾಸನ್ ಕನ್ನಡಿಗರ ಪ್ರೀತಿ ಗೌರವದ ಬಗ್ಗೆ ಶ್ಲಾಘಿಸುತ್ತಾ ಬಳಿಕ ನಿಮ್ಮ ಕನ್ನಡ ಹುಟ್ಟಿದ್ದು ನಮ್ಮ ತಮಿಳಿನಿಂದ ಎಂದಿದ್ದಾರೆ. ಕಮಲ್ ಹಾಸನ್ ಅವರ ಈ ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ. ಕನ್ನಡ ತಮಿಳಿಗಿಂತ ಪುರಾತನ ಭಾಷೆ ಎಂದು ಕನ್ನಡಿಗರು ನಟನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

Home add -Advt

ಅಲ್ಲದೇ ರಾಜ್ಯಾದ್ಯಂತ ನಟ ಕಮಲ್ ಹಾಸನ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಕಮಲ್ ಹಾಸನ್ ಸಿನಿಮಾಗಳನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕು, ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಲಳಬೇಕು. ಇಲ್ಲವಾದಲ್ಲಿ ಕರ್ನಾಟಕದಲ್ಲಿ ಕಮಲ್ ಚಿತ್ರ ಬಿಡುಗಡೆಗೆ ಬಿಡಲ್ಲ ಎಂದಿದ್ದಾರೆ .

ಗಡಿ ಜಿಲ್ಲೆ ಬೆಳಗಾವಿಯಲ್ಲಿಯೂ ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ನಟ ಕಮಲ್ ಹಾಸನ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ತನ್ನ ಹೇಳಿಕೆ ವಾಪಸ್ ಪಡೆಯಬೇಕು. ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ದೀಪಕ ಗುಡಗನಟ್ಟಿ
ಗಣೇಶ ರೋಖಡೆ,
ಬಾಳು ಜಡಗಿ,
ಸತೀಶ ಗುಡದವರ,
ಯಲ್ಲಪ್ಪಾ ತೆರಣಿ,
ಪ್ರಕಾಶ ಲಮಾಣಿ,
ಮಂಜುನಾಥ ರಾಠೋಡ್,
ಲೋಕೇಶ್ ರಾಠೋಡ,
ಅರ್ಜುನ ಕಾಂಬಳೆ,
ಅಭಿಷೇಕ ಅಗಸಗಿ,
ಇಸ್ಮಾಯಿಲ್ ಮುಲ್ಲಾ,
ಗಂಗಾರಾಮ ಶೀಗಿಹಳ್ಳಿ,
ಸಂತೋಷ್ ಚಕ್ರಯಿ,
ಭೂಪಾಲ ಅತ್ತು,
ಶಿವು ಮಲಕಣ್ಣವರ,
ತೇಜಸ್ವಿನಿ ಮಾನೆ,
ಗೋಪಿ ರಾಠೋಡ,
ವಿನಾಯಕ ಕೋಳಿ,
ಬಸವರಾಜ ಲೊಳಸುರೆ,
ರಮೇಶ್ ಯರಗಣ್ಣವರ,
ಸಿದ್ದಪ್ಪ ಕುರಬರ ಮೊದಲಾದವರು ಇದ್ದರು.


Related Articles

Back to top button