Belagavi NewsBelgaum NewsKarnataka News

*KSRTC-ಲಾರಿ ಭೀಕರ ಅಪಘಾತ: ವೃದ್ಧೆ ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಭೀಕರ ಅಪಘಾತಕ್ಕೆ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ. ಕೆ.ಎಸ್.ಆರ‍್.ಟಿ.ಸಿ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ವೃದ್ಧೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗೋಕಾಕ್ ತಾಲೂಕಿನ ಬೆಣಚಿನಮರಡಿ ಹೊರವಲಯದಲ್ಲಿ ಈ ದುರಂತ ಸಂಭವಿಸಿದೆ. ಅಪಘಾತದ ಭೀಕರತೆಗೆ ಬಸ್ ಪಲ್ಟಿಯಾಗಿದ್ದು, ಬಸ್ ನಡಿ ಸಿಲುಕಿ ವೃದ್ಧೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ 15 ಜನರು ಗಾಯಗೊಂಡಿದ್ದಾರೆ.

Home add -Advt

ಮೃತರನ್ನು ಕೊಳವಿ ಗ್ರಾಮದ ಯಲ್ಲವ್ವ ಬೀರನಗಡ್ಡಿ (70) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಗೋಕಾಕ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

*ತೆರೆದ ವಾಹನದಲ್ಲಿ RCB ಆಟಗಾರರ ಮೆರವಣಿಗೆ ಇಲ್ಲ: ಗೃಹ ಸಚಿವರ ಮಾಹಿತಿ*


Related Articles

Back to top button