Belagavi NewsBelgaum NewsKannada NewsKarnataka NewsLatest

*ಈ ಐದು ದಿನ ಬೆಳಗಾವಿಯಲ್ಲಿ ಮಧ್ಯದ ಅಂಗಡಿಗಳು ಬಂದ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಬೆಳಗಾವಿ ತಾಲೂಕಿನಾದ್ಯಂತ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬೆಳಗಾವಿ ಕಮೀಷನರೇಟ್ ವ್ಯಾಪ್ತಿ, ಬೆಳಗಾವಿ ತಾಲೂಕಿನಾದ್ಯಂತ ಮಧ್ಯ ಮಾರಾಟ ನಿಷೇಧಿಸಲಾಗಿದೆ.

ದಿನಾಂಕ: 27-08-2025 ರಿಂದ 06-09-2025 ರವರೆಗೆ 11 ದಿನಗಳ ಕಾಲ ಗಣೇಶ ಉತ್ಸವ ನಡೆಯಲಿದ್ದು, ಯಾವುದೇ ಅಹೀತಕರ ಘಟನೆ ನಡೆಯದಂತೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹೀತದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ದಿನಾಂಕ: 26-08-2025 ಮಧ್ಯರಾತ್ರಿಯಿಂದ ದಿನಾಂಕ: 28-08-2025 ರಂದು ಬೆಳಗ್ಗೆ 6 ಗಂಟೆಯವರೆಗೆ ನಿಷೇಧಿಸಲಾಗಿದೆ.

ಅದೇ ರೀತಿಯಲ್ಲಿ ದಿನಾಂಕ: 06-09-2025 ರಂದು ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆ ಕಾಲಕ್ಕೆ ದಿನಾಂಕ: 05-09-2025 ರಂದು ಸಾಯಂಕಾಲ 6 ಗಂಟೆಯಿಂದ 08-09-2025 ರಂದು ಬೆಳಿಗ್ಗೆ 6 ಗಂಟೆಯವರೆಗೆ ಮಧ್ಯದ ಅಂಗಡಿ, ವೈನಶಾಪ್, ಬಾರ್‌ಗಳಲ್ಲಿ, ಕ್ಲಬ್‌ಗಳಲ್ಲಿ ಮತ್ತು ಹೊಟೇಲ್ ಗಳಲ್ಲಿ ಮದ್ಯ ಮಾರಾಟ ಮತ್ತು ಮದ್ಯ ಸಾಗಣಿಕೆಯನ್ನು ನಿಷೇಧಿಸಿ, ಮಧ್ಯದ ಅಂಗಡಿಗಳನ್ನು ಹಾಗೂ ಕೆಎಸ್‌ಬಿಸಿಎಲ್ ಡಿಪೋಗಳನ್ನು, ಹೊಟೇಲ್‌ಗಳಲ್ಲಿರುವ ಬಾರ್ಗಗಳನ್ನು ಮುಚ್ಚತಕ್ಕದ್ದು ಹಾಗೂ ಎಲ್ಲ ಅಬಕಾರಿ ಸನ್ನದು ಅಂಗಡಿಗಳನ್ನು ಮುಚ್ಚಿ ಸೀಲ್ ಹಾಕತಕ್ಕದ್ದು ಎಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳು ಹಾಗೂ ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button