Belagavi NewsBelgaum NewsKannada NewsKarnataka NewsLatest

*ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಸಿರಿಗನ್ನಡ ಗೌರವ ಹಾಗೂ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಪ್ರಕಟ*

ಡಾ. ಅರವಿಂದ ಕುಲಕರ್ಣಿ ಮತ್ತು ಪ್ರೊ. ಚಂದ್ರಕಾಂತ ಪೋಕಳೆ ಗೆ ಸಿರಿಗನ್ನಡ ಗೌರವ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದವರು ನೀಡುವ 2025 ನೇ ವರ್ಷದ ಸಿರಿಗನ್ನಡ ಗೌರವ ಪ್ರಶಸ್ತಿ ಹಾಗೂ 2024 ನೇ ವರ್ಷದ ಸಿರಿಗನ್ನಡ ಪುಸ್ತಕ ಪ್ರಶಸ್ತಿಗಳು ಪ್ರಕಟಗೊಂಡಿವೆ.

ಸಿರಿಗನ್ನಡ ಗೌರವ ಪ್ರಶಸ್ತಿಗಳು ಡಾ. ಅರವಿಂದ ಕುಲಕರ್ಣಿ (ರಂಗಭೂಮಿ), ಪ್ರೊ. ಚಂದ್ರಕಾಂತ ಪೋಕಳೆ (ಸಾಹಿತ್ಯ) ಮತ್ತು ಸಿರಿಗನ್ನಡ ಪುಸ್ತಕ ಪ್ರಶಸ್ತಿಗಳು ಪಾರ್ವತಿ ಪಿಟಗಿಯವರು ರಚಿಸಿದ ‘ಪುನರುತ್ಥಾನ’ (ಕಾದಂಬರಿ) ಹಾಗೂ ನಾಗೇಶ ನಾಯಕ ಅವರು ಬರೆದ ‘ಮನುಷ್ಯರಿಲ್ಲದ ನೆಲ’ (ಪ್ರವಾಸ ಕಥನ) ಕೃತಿಗಳು ಪಡೆದುಕೊಂಡಿವೆ

ಪ್ರೊ. ಪಿ. ಕೆ. ಭಾಗೋಜಿ ದತ್ತಿನಿಧಿ ಪ್ರಶಸ್ತಿ ಡಾ. ದಯಾನಂದ ನೂಲಿ, ಲೇಖಕರು (ಜೀವಮಾನ ಸಾಧನೆಗಾಗಿ), ದಿ. ಸೌ ಸುಮನ ಗುರುನಾಥ ಹುದಲಿ ದತ್ತಿನಿಧಿ ಪ್ರಶಸ್ತಿ ಶ್ರೀಮತಿ ವಿಜಯಲಕ್ಷ್ಮೀ ವೆಂಕಟೇಶ ಕುಲಕರ್ಣಿ (ಸಾಮಾಜಿಕಸೇವೆ ಕ್ಷೇತ್ರ ಮಹಿಳೆಯರಿಗಾಗಿ), ಡಾ. ಲತಾ ಗುತ್ತಿ ದತ್ತಿನಿಧಿ ಪ್ರಶಸ್ತಿ ಹಮೀದಾ ಬೇಗಂ ದೇಸಾಯಿ (ಜಿಲ್ಲೆಯ ಲೇಖಕಿರಿಗೆ – ಜೀವಮಾನ ಸಾಧನೆಗಾಗಿ), ದಿ. ವೆಂ. ಲ. ಜೋಶಿ ಸ್ಮಾರಕ ದತ್ತಿನಿಧಿ ಪ್ರಶಸ್ತಿ ನಿರಜಾ ಗಣಾಚಾರಿ (ಶ್ರೇಷ್ಠ ಶಿಕ್ಷಕ ಸಾಹಿತಿ), ದಿ. ರಾಮಚಂದ್ರಪ್ಪ ಗೋನಬಾಳ ಹಾಗೂ ದಿ. ಷಣ್ಮುಖಪ್ಪ ಗೋನಬಾಳ ಇವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರೊ. ವಿ. ಎಸ್. ಮಾಳಿ (ವೈಚಾರಿಕ ಸಂಪನ್ಮೂಲ ವ್ಯಕ್ತಿ), ಡಾ. ಸಿ.ಕೆ. ನಾವಲಗಿ ದತ್ತಿನಿಧಿ ಪ್ರಶಸ್ತಿಜ್ಯೋತಿರ್ಲಿಂಗ ಹೊನಕಟ್ಟಿ(ಜನಪದ ಕಲಾವಿದರಿಗೆ)

Home add -Advt

ದತ್ತಿನಿಧಿ ಪುಸ್ತಕ ಪ್ರಶಸ್ತಿಗಳಾದ ಶ್ರೀ ಅಪ್ಪಾಸಾಹೇಬ ಸದರಜೋಶಿ ಕುಟುಂಬದ ದತ್ತಿ ನಿಧಿ ಪ್ರಶಸ್ತಿ ಡಾ. ಪ್ರಭಾ ಬೋರಗಾಂವಕರ ಅವರ ‘ಹೆಣ್ಣು ಹುಣ್ಣಲ್ಲ ಹೂವು’ (ವೈಚಾರಿಕ ಸಾಹಿತ್ಯ), ದಿ. ರಾಮರಾವ ಶಿರಹಟ್ಟಿ ದತ್ತಿನಿಧಿ ಪ್ರಶಸ್ತಿ ರೀಟಾ ಬಣಕಾರ ಅವರ ‘ಮೊದಲ ಧ್ವನಿ’ (ಲೇಖಕರ ಅತ್ಯುತ್ತಮ ಪ್ರಥಮ ಕೃತಿ), ಕೆ. ಚಂದ್ರಮೌಳಿ ದತ್ತಿನಿಧಿ ಪ್ರಶಸ್ತಿ ಎಲ್.ಎಸ್. ಶಾಸ್ತ್ರಿ ‘ಎಂಥ ಮರುಳಯ್ಯ ಇದು ಎಂಥಾ ಮರಳೋ’ (ಪ್ರವಾಸ ಕಥನ), ಪಿ. ವಿಜಯಕುಮಾರ ದತ್ತಿನಿಧಿ ಪ್ರಶಸ್ತಿ ರಾಜೇಂದ್ರಸ್ವಾಮಿ ಹಿರೇಮಠಯವರ ‘ಚಿಣ್ಣರ ಚಿಗುಳಿ’ (ಮಕ್ಕಳ ಕವನಗಳು), ದಿ. ಹಣಮಂತರಾವ ಸವಣೂರ ದತ್ತಿನಿಧಿ ಪ್ರಶಸ್ತಿ ಮಂಜುನಾಥ ಕಳಸಣ್ಣವರ ‘ಗಂಡು ಮೆಟ್ಟಿನ ರಾಣಿ’ (ಕಾದಂಬರಿ), ಶ್ರೀ ಎಸ್. ಎಂ. ಕುಲಕರ್ಣಿ ಷಷ್ಠಬ್ಧಿ ಸಮಿತಿ ದತ್ತಿನಿಧಿ ಪ್ರಶಸ್ತಿ ಡಾ. ವಾಯ್. ಎಂ. ಯಾಕೊಳ್ಳಿ ‘ಅಮೃತದ ತೊಟ್ಟು’ (ಚಿಂತನಗಳು) ದಿ. ಚಂದ್ರವ್ವ ಧರ್ಮಾಜಿ ಅನಿಗೋಳ ದತ್ತಿನಿಧಿ ಪ್ರಶಸ್ತಿ ಮಧುರಾ ಕರ್ಣಂ ‘ಬೌದ್ಧಾವತಾರ’ (ಕಥಾ ಸಂಕಲನ) ಶಿವಕವಿ ಉಳವೀಶ ಹುಲೆಪ್ಪನವರಮಠ ದತ್ತಿನಿಧಿ ಪ್ರಶಸ್ತಿ ಎಂ. ಬಿ. ಹೂಗಾರ ‘ಭವಕೆ ಬಂದ ಬೆಳಕು’ (ಚೌಪದಿ) ಶ್ರೀಮತಿ ಭಾರತಿಬಾಯಿ ಬಾಳಕೃಷ್ಣ ಜೋಶಿ ಸ್ಮಣರ್ಾರ್ಥ ದತ್ತಿನಿಧಿ ಪ್ರಶಸ್ತಿ ಸುರೇಶ ದೇಸಾಯಿ ‘ಸಾಹಿತ್ಯ ಸರಸ್ವತಿಯರು’ (ವ್ಯಕ್ತಿ ಚಿತ್ರಗಳು) ಧಾರವಾಡದ ಶಶಿಧರ ನರೇಂದ್ರ, ಮತ್ತು ಉಜಿರೆಯ ಹಳೆಮನೆ ರಾಜಶೇಖರ ಈ ಸ್ಪರ್ಧೆಗಳ ನಿರ್ಣಾಯಕರಾಗಿದ್ದರೆಂದು ಕಾರ್ಯದರ್ಶಿ ಗುಂಡೇನಟ್ಟಿ ಮಧುಕರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related Articles

Back to top button