Latest

*ಬರಿ ನೀರಲ್ಲ, ಅವರು ಹೋದಲ್ಲೆಲ್ಲ ಗಂಜಲ ಹಾಕಿ ತೊಳಿಬೇಕು; ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ಹಿಗ್ಗಾ ಮುಗ್ಗಾ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸಿವೆ. ಪರಸ್ಪರ ವಾಕ್ಸಮರ, ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದೆ. ಕಾಂಗ್ರೆಸ್ ನವರು ಸರಿಯಿಲ್ಲ, ಅವರು ಹೋದಲೆಲ್ಲ ಗಂಜಳ ಹಾಕಿ ತೊಳೆಯಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಚಿವ ಅಶೋಕ್, ಕಾಂಗ್ರೆಸ್ ಆಡಳಿತವಿದ್ದಾಗ, ಸಿದ್ದರಾಮಯ್ಯ ಸಂಪುಟವಿದ್ದಾಗ ಏನಾದರೂ ಒಳ್ಳೆಯದಾಗಿದ್ಯಾ? ಅವರು ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳಾಗಿದ್ದರೆ ಅವರ ಪಕ್ಷ ಬಿಟ್ಟು 16 ಜನ ಯಾಕೆ ಓಡಿ ಹೋಗುತ್ತಿದ್ದರು? ಬಿದ್ದರೂ ಮೀಸೆ ಮಣ್ಣಿಗಿಲ್ಲ ಎಂಬಂತೆ ಈಗ ಕಾಂಗ್ರೆಸ್ ನವರು ಬಸ್ ಯಾತ್ರೆ ಮಾಡಲು ಹೊರಟಿದ್ದಾರೆ. ಜನರ ಮುಂದೆ ಮತ ಕೇಳಲು ಹೊರಟಿದ್ದಾರೆ ಎಂದು ಗುಡುಗಿದ್ದಾರೆ.

Home add -Advt

ಕಾಂಗ್ರೆಸ್ ನಾಯಕರು ಹೋದಲೆಲ್ಲ ಬರಿ ನೀರಲ್ಲ, ಗಂಜಲ ಹಾಕಿ ತೊಳಿಯಬೇಕು. ಅಂದಾಗ ಮಾತ್ರ ಪಾಪ ಹೋಗುತ್ತದೆ. ಕಾಂಗ್ರೆಸ್ ನವರು ಎಲ್ಲೆಲ್ಲಿ ಹೋಗ್ತಿದ್ದಾರೆ ಅಲ್ಲೆಲ್ಲ ಗಂಜಲ ಹಾಕಿ ತೊಳೆದಾಗ ಮಾತ್ರ ಪಾಪ ಹೋಗುವುದು ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಐದು ವರ್ಷಗಳ ದುರಾಡಳಿತ ನಡೆಸಿದರು. ಆಡಳಿತವಿದ್ದಾಗ ಜನರಿಗೆ ಮೋಸ ಮಾಡಿದರು. ರಾಜ್ಯದಲ್ಲಿ ಲೂಟಿ ಮಾಡಿದರು. ಕಾಂಗ್ರೆಸ್ ದರೋಡೆಕೋರರ ಕೂಟವಾಗಿದೆ. ಕಾಂಗ್ರೆಸ್ ನಾಯಕರು ಏನೇ ಕಸರತ್ತು ಮಾಡಿದರು ಚುನಾವಣೆಯಲ್ಲಿ ಭ್ರಮನಿರಸನವಾಗಲಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಆರಂಭ

https://pragati.taskdun.com/rayanna-utsav-begins-with-the-celebration-of-krantivir/

Related Articles

Back to top button