Belagavi NewsBelgaum NewsKarnataka News
*ಬೆಳಗಾವಿ: ಹಾಡಹಗಲೇ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಕಳ್ಳತನಕ್ಕೆ ಯತ್ನ: ಹೆಲ್ಮೆಟ್ ಧರಿಸಿ ಬಂದು ಗನ್ ತೋರಿಸಿ ಬೆದರಿಸಿದ ಖದೀಮರು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಹಾಡಹಗಲೇ ಚಿನ್ನದ ಅಂಗಡಿ ದೋಚಲು ಕಳ್ಳರು ಯತ್ನಿಸಿರುವ ಘಟನೆ ನಡೆದಿದೆ. ಹೆಲ್ಮೆಟ್ ಧರಿಸಿ ಬಂದು ಚಿನ್ನದ ಅಂಗಡಿಗೆ ನುಗ್ಗಿದ ಇಬ್ಬರು ಕಳ್ಳರು ಗನ್ ತೋರಿಸಿ ಬೆದರಿಕೆಯೊಡ್ಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತ್ರಿಮೂರ್ತಿ ಜ್ಯುವೆಲ್ಲರಿ ಶಾಪ್ ನಲ್ಲಿ ಈ ಘಟನೆ ನಡೆದಿದೆ. ಹೆಲ್ಮೆಟ್ ಹಾಕಿಕೊಂಡು ಬಂದಿದ್ದ ಇಬ್ಬರು ಕಳ್ಳರು ಗನ್ ತೋರಿಸಿ ಚಿನ್ನದಂಗಡಿ ಮಾಲೀಕನಿಗೆ ಬೆದರಿಕೆ ಹಾಕಿದ್ದಾರೆ. ಮಹೇಶ್ ಪೋತದಾರ್ ಎಂಬುವವರಿಗೆ ಸೇರಿದ ಚಿನ್ನದಂಗಡಿಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ.
ಗನ್ ತೋರಿಸುತ್ತಿದ್ದಂತೆ ಮಾಲೀಕ ಕಿರುಚಿಕೊಂಡಿದ್ದಾರೆ. ಕಿರುಚಾಟ ಕೇಳಿ ಸ್ಥಳೀಯರು ಧಾವಿಸುತ್ತಿದ್ದಂತೆ ಕಳ್ಳರು ಓಡಿ ಹೋಗಿದ್ದಾರೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.