Belagavi NewsBelgaum NewsKarnataka News

*BREAKING: ಬೆಳಗಾವಿಯಲ್ಲಿ ಮತ್ತೊಂದು ಘೋರ ಘಟನೆ*

ಬುದ್ಧಿ ಹೇಳಿದ್ದಕ್ಕೆ ವ್ಯಕ್ತಿಗೆ ಖಾರದಪುಡಿ ಎರಚಿ ಚಾಕು ಇರಿದ ಯುವಕ

ಪ್ರಗತಿವಾಹಿನಿ ಸುದ್ದಿ: ಯುವತಿಯೊಂದಿಗೆ ದೇವಸ್ಥಾನಕ್ಕೆ ಹೋಗಿ ಪ್ರೀತಿ-ಪ್ರೇಮ ಎಂದು ಸುತ್ತಾಡುತ್ತಿದ್ದ ಯುವಕನಿಗೆ ಬುದ್ಧಿವಾದ ಹೇಳಿದ್ದಕ್ಕೆ ಆತ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ದರ್ಶನ್ ಚಾಕು ಇರಿದ ಆರೋಪಿ. ಮಡಿವಾಳಪ್ಪ ಗಂಭೀರವಾಗಿ ಹಲ್ಲೆಗೊಳಗಾದ ವ್ಯಕ್ತಿ. ದರ್ಶನ್ ಯುವತಿಯೊಂದಿಗೆ ದೇವಸ್ಥಾನಕ್ಕೆ ಹೋಗಿದ್ದ. ಇದಕ್ಕೆ ಮಡುವಾಳಪ್ಪ ಎಂಬುವವರು ಯುವತಿಯ ಕುಟುಂಬದವರ ಎದುರಿಗೆ ಯುವಕನಿಗೆ ಬುದ್ಧಿ ಹೇಳಿದ್ದಾರೆ. ಪ್ರೀತಿ-ಪ್ರೇಮ ಎಂದು ಹೀಗೆ ಸುತ್ತಾಡುವುದು ಸರಿಯಲ್ಲ ತಿದ್ದಿಕೊಂಡು ನಡೆಯುವಂತೆ ಹೇಳಿದ್ದರು.

ಇದರಿಂದ ಕೋಪಗೊಂಡ ಯುವಕ ದರ್ಶನ್, ಮಡಿವಾಳಪ್ಪ ಅವರ ಕಣ್ಣಿಗೆ ಖಾರದಪುಡಿ ಎರಚಿ, ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಡಿವಾಳಪ್ಪ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button