Kannada NewsKarnataka News

ಹೃದಯಾಘಾತದಿಂದ SSLC ವಿದ್ಯಾರ್ಥಿ ಸಾವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯೋರ್ವ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಬೆಳಗಾವಿಯ ಮಜಗಾವಿಯಲ್ಲಿ ನಡೆದಿದೆ.
ನಗರದ ಸೇಂಟ್ ಪಾಲ್ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಮಂಥನ್ ಪಾಟೀಲ್ (16 ) ಮೃತಪಟ್ಟವನು.
ಉತ್ತಮ ಕ್ರೀಡಾಪಟುವಾಗಿದ್ದ ಮಂಥನ್ ದಿನವೂ ನಸುಕಿನಲ್ಲಿ ಎದ್ದು ವ್ಯಾಯಾಮ ಮತ್ತು ಕ್ರೀಡೆಯ ಪ್ರ್ಯಾಕ್ಟೀಸ್ ಮಾಡುತ್ತಿದ್ದ. ಅಂತೆಯೇ ಭಾನುವಾರ ಬೆಳಗ್ಗೆ 4.30 ಕ್ಕೆ ಎದ್ದು ಬಚ್ಚಲು ಮನೆಗೆ ಹೋದವನು ಹೃದಯಾಘಾತದಿಂದ ಅಲ್ಲಿಯೇ ಕುಸಿದು ಬಿದ್ದಿದ್ದಾನೆ.
ಮಗ ಎಷ್ಟು ಹೊತ್ತಾದರೂ ಬಾತ್ ರೂಮಿನಿಂದ ಹೊರ ಬರದ ಕಾರಣ ಅನುಮಾನಗೊಂಡ ತಂದೆ ತಾಯಿ ಬಂದು ನೋಡಿದಾಗ ಮಂಥನ್ ಮೃತಪಟ್ಟಿದ್ದು ಗೊತ್ತಾಗಿದೆ.
ಈಗಿನ್ನೂ ಜಗತ್ತನ್ನು ನೋಡಬೇಕಿದ್ದ ಹದಿವಯಸ್ಸಿನ ಬಾಲಕ ಮೃತಪಟ್ಟ ಆಘಾತದಿಂದ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.

ಕೊರೋನಾ 3ನೇ ಅಲೆ ಬೆಳಗಾವಿಯಲ್ಲಿ ಭಾನುವಾರ ಸೋಂಕಿತರ ಸಂಖ್ಯೆ ಹೊಸ ಎತ್ತರಕ್ಕೆ

Related Articles
Home add -Advt

Related Articles

Back to top button