ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಾಜಕಟ್ಟಿ ಗ್ರಾಮದಲ್ಲಿ ಶಾಲಾ ಕೊಠಡಿಯ ಉದ್ಘಾಟನೆಗೆ ಆಗಮಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರನ್ನು ಕರ್ನಾಟಕ ರಾಜ್ಯ ಶಾಲಾ / ಕಾಲೇಜು ನೌಕರರ ಒಕ್ಕೂಟದ ಅಧ್ಯಕ್ಷ ಎಸ್ .ಎಸ್.ಮೂಕನವರ ಭೇಟಿ ಮಾಡಿ ರಾಜ್ಯದ ಅನುದಾನಿತ/ಅನುದಾನ ರಹಿತ ಶಾಲಾ – ಕಾಲೇಜು ಶಿಕ್ಷಕರ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು.
ರಾಜ್ಯದ ಶಿಕ್ಷಕರ ಸಮಸ್ಯೆಗಳಾದ
*ಅನುದಾನ ರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವದು.
*ಅನುದಾನಕ್ಕೆ ಒಳಪಡಿಸಿದ ಶಾಲೆಗಳಲ್ಲಿ ಶೀಘ್ರ ಶಿಕ್ಷಕರ ನೇಮಕ
*ಅನುದಾನಕ್ಕೆ ಒಳಪಡಿಸಿದ ಶಾಲೆಗಳಲ್ಲಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆ
*ಕೋವಿಡ್-19 ಸಂದರ್ಭದಲ್ಲಿ ಅನುದಾನ ರಹಿತ ಕೆಲವು ಶಾಲಾ/ಕಾಲೇಜು ಶಿಕ್ಷಕರಿಗೆ ಕೋವಿಡ್ ಪ್ಯಾಕೇಜ್ ಹಣ ಬಿಡುಗಡೆ ಮಾಡುವಂತೆ ಕೋರಿಕೆ.
ಹುಕ್ಕೇರಿ ತಾಲೂಕಿನ ಗುಟಗುದ್ದಿ ಗ್ರಾಮದ RMS ಶಾಲೆಯ ಕಟ್ಟದ ಕೊರತೆ, ಪೂರ್ಣಕಾಲಿಕ ಶಿಕ್ಷಕರ ಸಮಸ್ಯೆ ಕುರಿತು ಸಚಿವರಿಗೆ ಮನವರಿಕೆ ಮಾಡಲಾಯಿತು.
ಮನವಿಗೆ ಸ್ಪಂದಿಸಿದ ಶಿಕ್ಷಣ ಸಚಿವರು ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಈ ಸಮಯದಲ್ಲಿ ಬಿ.ಆರ್.ಬಂಜಿರಾಂ, ಹೊಳೆಪ್ಪ ಹುಲಿಕಟ್ಟಿ, ಯಲ್ಲೇಶ್ ಕೊಚ್ಚರಗಿ ಹಾಜರಿದ್ದರು.
ಎಲ್ಲ ಜಿಲ್ಲೆಗಳಲ್ಲೂ ವಿವಿ ಸ್ಥಾಪನೆ; ಯುವಿಸಿಇ, ವಿಟಿಯು ಐಐಟಿ ಮಟ್ಟಕ್ಕೆ: ಅಶ್ವತ್ಥನಾರಾಯಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ