Belagavi NewsBelgaum NewsKannada NewsKarnataka NewsLatest

*ಭಂಡಾರದಲ್ಲಿ ಮಿಂದೆದ್ದ ಗ್ರಾಮದೇವಿ ಭಕ್ತರು*

ಬೆಟಗೇರಿ ಗ್ರಾಮದೇವತೆ ಜಾತ್ರಾ ಮಹೋತ್ಸವ

ಪ್ರಗತಿವಾಹಿನಿ ಸುದ್ದಿ; ಬೆಟಗೇರಿ: 5 ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಜರುಗುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ಶ್ರೀದ್ಯಾಮವ್ವದೇವಿ 3ನೇ ಜಾತ್ರಾಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು 4ನೇ ದಿನವಾದ ಜು.27ರಂದು ವಿಜೃಂಭನೆಯಿಂದ ಜರುಗಿತು.

ಡಾ.ಅಂಬೇಡ್ಕರ ಸರ್ಕಲ್‌ನಲ್ಲಿ ಮುಂಜಾನೆ ಶ್ರೀದೇವಿಗೆ ನೈವೇದ್ಯ, ಉಡಿ ತುಂಬುವ ಕಾರ್ಯಕ್ರಮದ ಬಳಿಕ ಅಂಬೇಡ್ಕರ್ ಸರ್ಕಲ್‌ದಿಂದ ಶ್ರೀದೇವಿಯನ್ನು ಪ್ರಮುಖ ಬೀದಿಗಳ ಮುಖಾಂತರ ತಂದು ಶ್ರೀ ಲಕ್ಷ್ಮೀಮಂದೇವಿ ದೇವಸ್ಥಾನದಲ್ಲಿ ಕೂಡ್ರಿಸಲಾಯಿತು. ಮುಂಜಾನೆ 8 ಗಂಟೆಗೆ 45-55 ಎಚ್‌ಪಿ ಓಳಗಿನ ಟ್ಯಾಕ್ಟರ್-ಟ್ಯಾಕ್ಟರ್ ಜಗ್ಗುವ ಸ್ಪರ್ಧೆ, ಮದ್ಯಾಹ್ನ 12 ಗಂಟೆಗೆ ಓಪನ್ ಟಗರಿನ ಕಾಳಗ, 2ಗಂಟೆಗೆ ಹಾಲಲ್ಲಿನ ಟಗರಿನ ಕಾಳಗ ಸ್ಪರ್ಧೆ ನಡೆದ ಬಳಿಕ ವಿವಿಧ ಶರ್ತುಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಸಂಜೆ 7 ಗಂಟೆಗೆ ಸ್ಥಳೀಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಝೀ ವಾಹಿನಿ ಕಲಾವಿದೆ ಕು.ಪ್ರಗತಿ ಬಡಿಗೇರ ಅವರಿಂದ ಸಂಗೀತ ಕಾರ್ಯಕ್ರಮ, ಗೋಕಾಕ ರತಿಕಾ ನೃತ್ಯ ನಿಕೇತನ ಅವರಿಂದ ಭರತನಾಟ್ಯ, ನೃತ್ಯ, ರಾಜೇಂದ್ರ ಮತ್ತು ನರೇಂದ್ರ ಲಕಾಟಿ ಅವರಿಂದ ಯೋಗ ನೃತ್ಯ ಕಾರ್ಯಕ್ರಮ ನಡೆಯಿತು.

Home add -Advt

ಸ್ಥಳೀಯ ಶ್ರೀದೇವಿಯ ಭಕ್ತರು, ಗಣ್ಯರು, ಗ್ರಾಮದೇವತೆ ಜಾತ್ರಾ ಮಹೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮದೇವತೆ ದೇವಾಲಯ ಅರ್ಚಕರು, ಸ್ಥಳೀಯರು ಇದ್ದರು. ಮಕ್ಕಳು, ಯುವಕರು ಒಬ್ಬರಿಗೊಬ್ಬರು ಭಂಡಾರ ಎರಚಿ ಭಂಡಾರದಲ್ಲಿ ಮಿಂದೆದ್ದು ಸಂಭ್ರಮಿಸಿದರು.

ನಾಳಿನ ಕಾರ್ಯಕ್ರಮ:
ಜು.28 ರಂದು ಮುಂಜಾನೆ 10:30 ಗಂಟೆಗೆ ಹರ, ಗುರು, ಚರಮೂರ್ತಿಗಳ, ಗಣ್ಯರ, ರಾಜಕೀಯ ಮುಖಂಡರ ಭವ್ಯ ಮೆರವಣಿಗೆ ಸಕಲ ವಾದ್ಯಾಮೇಳಗಳೊಂದಿಗೆ ಅಡವಿಸಿದ್ದೇಶ್ವರ ದೇವಸ್ಥಾನದಿಂದ ಶ್ರೀ ಗಜಾನನ ವೇದಿಕೆ ತನಕ ನಡೆದ ಬಳಿಕ ಸತ್ಕಾರ ಸಮಾರಂಭ ಜರುಗಲಿದೆ.

ಮುಗಳಖೋಡದ ಡಾ.ಮುರುಘರಾಜೇಂದ್ರ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ, ಬಾಗೋಜಿಕೊಪ್ಪದ ಡಾ. ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಜಿ, ಸುಣಧೋಳಿಯ ಅಭಿನವ ಶಿವಾನಂದ ಮಹಾಸ್ವಾಮಿಜಿ, ಮಮದಾಪೂರದ ಮೌನಮಲ್ಲಿಕಾರ್ಜುನ ಮಹಾಸ್ವಾಮಿಜಿ, ಕಡಕೋಳದ ಸಿದ್ರಾಯಜ್ಜನವರು ನೇತೃತ್ವ ವಹಿಸಲಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಸತ್ಕಾರ ಮೂರ್ತಿಗಳಾಗಿ, ರಂಗಭೂಮಿ ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿ, ಜಿಪಂ, ತಾಪಂ, ಗ್ರಾಪಂ, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಗಣ್ಯರು, ಸಂತ-ಶರಣರು ಮುಖ್ಯತಿಥಿಗಳಾಗಿ ಆಗಮಿಸಲಿದ್ದಾರೆ.

ಮಧ್ಯಾಹ್ನ12ಗಂಟೆಗೆ ಪುರ ಜನರಿಂದ ಶ್ರೀದೇವಿಗೆ ಉಡಿ ತುಂಬುವ ಮತ್ತು ನೈವೇದ್ಯ ಸಮರ್ಪನೆ ಕಾರ್ಯಕ್ರಮ ಜರುಗಲಿದೆ. ರಾತ್ರಿ ಶ್ರೀದೇವಿಯನ್ನು ಸೀಮೆಗೆ ಕಳುಹಿಸಲಾಗುವದು. ಜುಲೈ.28ರಂದು ಭಂಡಾರ ಆಡುವದನ್ನು ನಿಷೇದಿಸಲಾಗಿದೆ ಎಂದು ಇಲ್ಲಿಯ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಆಚರಣಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Back to top button