Belagavi NewsBelgaum NewsKarnataka News

*ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಅನಾರೋಗ್ಯಕ್ಕೀಡಾದ ತಂದೆಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾದ ಮಗ; ಯಾರೂ ದಿಕ್ಕಿಲ್ಲದೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಹಿರಿಜೀವ*

ಪ್ರಗತಿವಾಹಿನಿ ಸುದ್ದಿ: ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನು ಮಗ ಮಹಾಶಯನೊಬ್ಬ ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿದ್ದು, ನೊಂದ ಜೀವ ಚಿಕಿತ್ಸೆ ಫಲಕಾರಿಯಾಗದೇ ಅನಾಥವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಸತೀಶ್ವರ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ದುರ್ದೈವಿ. ಅನಾರೋಗ್ಯಕ್ಕೀಡಾಗಿದ್ದ ಸತೀಶ್ವರ್ ಅವರನ್ನು ಅವರ ಮಗ ಕೆಲ ದಿನಗಳ ಹಿಂದೆ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದ. ಹತ್ತು ದಿನಗಳ ಹಿಂದೆ ತಂದೆಯನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಏಕಾಏಕಿ ಪರಾರಿಯಾಗಿದ್ದಾನೆ. ಮಗ ಬರುತ್ತಾನೆ ಎಂಬ ಭರವಸೆಯಲ್ಲಿಯೇ ಜೀವ ಕೈಯಲ್ಲಿ ಹಿಡಿದು ಚಿಕಿತ್ಸೆ ಪಡೆಯುತ್ತಿದ್ದ ಸತೀಶ್ವರ್ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಮೃತದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದರೂ ಮಗನ, ಕುಟುಂಬದವರ ಸುಳಿವಿಲ್ಲ.

Home add -Advt

ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಆಗಮಿಸಿದ ಪೊಲೀಸರು, ಮೃತ ಸತೀಶ್ವರ್ ಅವರ ಮಗನ ಪತ್ತೆಗೆ ಯತ್ನಿಸಿದ್ದಾರೆ. ಆತ ಕೆಲ ಮಾಡುತ್ತಿದ್ದ ಸ್ಥಳದಲ್ಲೂ ವಿಚಾರಿಸಿದ್ದಾರೆ ಆದರೂ ಆತನ ಪತ್ತೆಯಾಗಿಲ್ಲ. ಬಳಿಕ ಸತೀಶ್ವರ್ ಅವರ ಮಗಳು ಗೋವಾದಲ್ಲಿ ವಾಸವಾಗಿದ್ದಾಳೆ ಎಂಬುದು ತಿಳಿದುಬಂದಿದೆ. ಗೋವಾದಿಂದ ಮಗಳನ್ನು ಕರೆಸಿ, ಸತೀಶ್ವರ್ ಅವರ ಅಂತ್ಯಸಂಸ್ಕಾರ ನೆರವೇಸಿದ್ದಾರೆ.

ತಂದೆಯ ಶವವನ್ನು ಗೋವಾಅಕ್ಕೆ ಕೊಂದೊಯ್ಯಲು ಮಗಳು ನಿರಾಕರಿಸಿದ್ದಾಲೆ. ಬೆಳಗಾವಿಯ ಸದಾಶಿವನಗರದಲ್ಲಿ ಸತೀಶ್ವರ್ ಅವರ ಅಂತ್ಯಸಂಸ್ಕಾರವನ್ನು ಮಗಳ ಸಮ್ಮುಖದಲ್ಲಿ ನೆರವೇಸಲಾಗಿದೆ.

Related Articles

Back to top button