ಪ್ರಗತಿವಾಹಿನಿ ಸುದ್ದಿ; ಮೂಡಲಗಿ: ಶಕ್ತಿಯುತ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವನ್ನು ಬಲಪಡಿಸುವ ಸಲುವಾಗಿ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಶುಕ್ರವಾರ ಕಲ್ಲೋಳಿ ಪಟ್ಟಣದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ನಿವಾಸಕ್ಕೆ ಉಪಚುನಾವಣೆ ಹಿನ್ನಲೆಯಲ್ಲಿ ಭೇಟಿ ನೀಡಿ, ಸನ್ಮಾನ ಸ್ವೀಕರಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದುತ್ವ ಮತ್ತು ರಾಷ್ಟ್ರೀಯ ಸಿದ್ದಾಂತಕ್ಕೆ ಪಕ್ಷ ಈಗಲೂ ಬದ್ಧವಾಗಿದ್ದು ವ್ಯಕ್ತಿ ಪೂಜೆಗಿಂತ ಪಕ್ಷದ ತತ್ವ ಸಿದ್ದಾಂತ ಪ್ರತಿಸಾಧನೆಗಳಿಗಾಗಿ ಕಾರ್ಯಕರ್ತರು ದುಡಿಯಬೇಕೆಂದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ದಿವಂಗತ ಸುರೇಶ ಅಂಗಡಿಯವರು ಸಾಕಷ್ಟು ಯೋಜನೆಗಳನ್ನು ಕೈಗೊಂಡಿದ್ದರು. ಅವುಗಳನ್ನು ಮುಂದುವರಿಸಿ ರಾಜ್ಯದ ಎರಡನೆಯ ರಾಜಧಾನಿ ಬೆಳಗಾವಿಯನ್ನು ದೇಶದ ಉನ್ನತ ನಗರಗಳಂತೆ ಬೆಳೆಸುವುದು ಪಕ್ಷದ ಮತ್ತು ಪ್ರಧಾನಿಯವರ ಆಶಯವಾಗಿದೆ ಎಂದರಲ್ಲದೇ ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ವಿನಂತಿಸಿದರು.
ಪಕ್ಷದ ಪ್ರಮುಖರಾದ ಬಸವರಾಜ ಕಡಾಡಿ, ಸುಭಾಸ ಪಾಟೀಲ, ಡಿಸಿಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ, ಶಿವಾನಂದ ಮುಗಳಿಹಾಳ, ಪರಪ್ಪ ಕಡಾಡಿ, ಬಸಗೊಂಡ ಪರಕನಟ್ಟಿ, ಕೃಷ್ಣಪ್ಪ ಮುಂಡಿಗನಾಳ, ಪ್ರಭು ಕಡಾಡಿ, ಬಸವರಾಜ ಜಗದಾಳೆ, ಮಹಾದೇವ ಮದಭಾಂವಿ, ಈರಣ್ಣ ಮುನ್ನೋಳಿಮಠ, ಅಡಿವೆಪ್ಪ ಕುರಬೇಟ, ರಾಮನಿಂಗ ಬಿ. ಪಾಟೀಲ, ಬಾಳಪ್ಪ ಮಟಗಾರ, ಬಸವರಾಜ ಖಾನಾಪೂರ, ತುಕಾರಾಮ ಪಾಲಕಿ, ಸಿದ್ದಪ್ಪ ಹೆಬ್ಬಾಳ, ಶಿವಾನಂದ ದಬಾಡಿ, ಪರಪ್ಪ ಗಿರೆಣ್ಣವರ ಸೇರಿದಂತೆ ಅನೇಕ ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಿದ್ದರಾಮಯ್ಯ ನೋಡಲು ಮುಗಿಬಿದ್ದ ಅಭಿಮಾನಿಗಳ ಮೇಲೆ ಲಾಠಿ ಪ್ರಹಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ