Kannada NewsKarnataka NewsLatest
ಡಾಕ್ಟರ್ಸ್ ಮೀಟ್ ನಡೆಸಿದ ಬಿಜೆಪಿ; ಅರುಣ್ ಸಿಂಗ್ ಭಾಗಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಬೆಳಗಾವಿಯಲ್ಲಿ ಶುಕ್ರವಾರ ಡಾಕ್ಟರ್ಸ್ ಮೀಟ್ ಆಯೋಜಿಸಿತ್ತು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಅರುಣ ಸಿಂಗ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸಚಿವ ಉಮೇಶ ಕತ್ತಿ, ಸಚಿವ ಶಂಕರ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ, ಡಾ.ಸ್ಫೂರ್ತಿ ಅಂಗಡಿ, ಡಾ.ಸೋನಾಲಿ ಸರ್ನೋಬತ್ ಮೊದಲಾದವರು ಭಾಗವಹಿಸಿದ್ದರು.
ಡಾ.ರವಿ ಪಾಟೀಲ ಸ್ವಾಗತಿಸಿದರು. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಕರ್ನಾಟಕ ಆಯುಷ್ ಡಾಕ್ಟರ್ಸ್, ಕರ್ನಾಟಕ ಹೋಮಿಯೇಪಥಿಕ್ ಅಸೋಸಿಯೇಶನ್ ವೈದ್ಯರು ಪಾಲ್ಗೊಂಡಿದ್ದರು.
ಡಾ.ಸೋನಾಲಿ ಸರ್ನೋಬತ್, ಡಾ.ಗಿರೀಶ್ ಸೋನ್ವಾಲ್ಕರ್, ಡಾ.ರವಿ ಪಾಟೀಲ ಸಭೆ ಆಯೋಜಿಸಿದ್ದರು.





