Kannada NewsLatest

ಬೆಳಗಾವಿಯಲ್ಲಿ ಮತ್ತೊಂದು ಬೆಂಕಿ ಅವಘಡ; ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇತ್ತೀಚೆಗೆ ಬೆಂಕಿ ಅವಘಡ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೊಂದು ಅಗ್ನಿ ಆಕಸ್ಮಿಕ ಸಂಭವಿಸಿದ್ದು, ರಸ್ತೆ ಮಧ್ಯೆಯೇ ಓಮಿನಿ ಕಾರೊಂದಕ್ಕೆ ಬೆಂಕಿಬಿದ್ದು, ಹೊತ್ತಿ ಉರಿದಿದೆ.

ಹಿಂಡಲಗಾ ರಸ್ತೆಯ ಗಣಪತಿ ದೇವಸ್ಥಾನದ ಬಳಿ ಕಾರೊಂದಕ್ಕೆ ಏಕಾಏಕಿ ಬೆಂಕಿ ಬಿದ್ದಿದ್ದು, ನೋಡ ನೋಡುತ್ತಿದ್ದಂತೆಯೇ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

Home add -Advt

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.

Related Articles

Back to top button