Kannada NewsLatest

ಕರ್ತವ್ಯ ನಿರತ ಬೆಳಗಾವಿ ಯೋಧ ದಿಢೀರ್ ಸಾವು

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಕರ್ತವ್ಯ ನಿರ್ವಹಿಸುತ್ತಿದ್ದ ಬೆಳಗಾವಿ ಮೂಲದ ಯೋಧರೊಬ್ಬರು ಉತ್ತರಪ್ರದೇಶದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ಸಿಐಎಸ್ ಎಫ್ ನ ಯೋಧ 30 ವರ್ಷದ ನವನಾಥ ಅಪ್ಪಾ ದಿವಟೆ ಮೃತರು. ನವನಾಥ ದಿವಟೆ, ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕುರ್ಲಿ ಗ್ರಾಮದ ನಿವಾಸಿಯಾಗಿದ್ದು, ಕರ್ತವ್ಯನಿರತರಾಗಿದದಗಲೇ ಏಕಾಏಕಿ ಅಸ್ವಸ್ಥಗೊಂಡಿದ್ದಾರೆ. ಅನಾರೋಗ್ಯಕ್ಕೀಡಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Home add -Advt

ಕಳೆದ 10 ವರ್ಷಗಳಿಂದ ಭಾರತೀಯ ಸೈನ್ಯದಳದಲ್ಲಿ ನವನಾಥ ದಿವಟೆ ಕಾರ್ಯನಿರ್ವಹಿಸುತ್ತಿದ್ದರು. ಉತ್ತರಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದರು.

ಮೃತ ಯೋಧನ ಪಾರ್ಥಿವ ಶರೀರ ಇಂದು ನಿಪ್ಪಾಣಿಯ ಕುರ್ಲಿ ಗ್ರಾಮಕ್ಕೆ ಆಗಮಿಸಲಿದೆ.
ACB ಬಲೆಗೆ ಸಬ್ ರಿಜಿಸ್ಟ್ರಾರ್ ಮತ್ತು ಬಾಂಡ್ ರೈಟರ್

Related Articles

Back to top button