Kannada NewsLatest

ಶಿಕ್ಷಕರ, ಪದವೀಧರ ಕ್ಷೇತ್ರದ ಅಭಿವೃದ್ದಿ ಕಾಂಗ್ರೆಸ್‌ ನಿಂದ ಮಾತ್ರ ಸಾಧ್ಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

 

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; “ಸಜ್ಜನತೆ, ಪ್ರಾಮಾಣಿಕತೆಗೆ ಹೆಸರಾದ ಅಭ್ಯರ್ಥಿಗಳನ್ನು ನಿಮಗೆ ಕೊಟ್ಟಿದ್ದೇವೆ. ಅವರನ್ನು ಬಹುಮತದಿಂದ ಗೆಲ್ಲಿಸಿ, ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ಇಲ್ಲಿನ ಮರಾಠಾ ಭವನದಲ್ಲಿ ಬುಧವಾರ ಕೆಪಿಸಿಸಿ ಕಾರ್ಯಧ್ಯಕ್ಷ, ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಉಮೇದಾರಿಕೆ ಸಲ್ಲಿಸಿದ ಬಳಿಕ, ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಧಾರವಾಡ, ಹಾಸನ, ಮಂಡ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ ಅವರ ಪಕ್ಷದ ನಾಯಕರು ಆಯ್ಕೆಯಾಗುವುದಿಲ್ಲ ಎಂಬ ಆತಂಕದಿಂದಲೇ ಹೊಸಮುಖಗಳಿಗೆ ಅವಕಾಶ ನೀಡಿದ್ದಾರೆ. ಹೀಗಾಗಿ ಹೊರಟ್ಟಿಯವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರ ಕಾಲೆಳೆದರು.

ಶಿಕ್ಷಣ ಕ್ಷೇತ್ರಕ್ಕೆ ʻಕೈʼ ಕೊಡುಗೆ ಅಪಾರ:

ಶಿಕ್ಷಣ ಕ್ಷೇತ್ರ ಬಹಳಷ್ಟು ಬದಲಾವಣೆಯಾಗಬೇಕಾಗಿದೆ. ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್‌ ನೀಡಿರುವ ಕೊಡುಗೆಗಳನ್ನು ತಿಳಿಸುವ ಮೂಲಕ, ಕಾರ್ಯಕರ್ತರು ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸಬೇಕು ಎಂದರು.

ಪ್ರಕಾಶ ಹುಕ್ಕೇರಿ ಹಿರಿಯ ನಾಯಕರು. ಜಿಲ್ಲಾ ಪಂಚಾಯತಿಯಿಂದ ಹಿಡಿದು ಸಂಸತ್ ವರೆಗಿನ ಎಲ್ಲ ಹಂತಗಳಲ್ಲೂ ಕ್ರಿಯಾಶೀಲವಾಗಿ ಪಾಲ್ಗೊಂಡು ಅಭಿವೃದ್ಧಿ ಸಾಧಿಸಿದ ಅನುಭವ ಇದೆ. ಈ ಕ್ಷೇತ್ರದಲ್ಲಿ ತಮ್ಮ ಸೇವೆ ಮಾಡಲು ಅಖಾಡಕ್ಕೆ ದುಮ್ಮಿಕ್ಕಿದ್ದಾರೆ, ತಾವು ಆಶೀರ್ವಾದ ಮಾಡಬೇಕು ಎಂದರು.

ರಾಜ್ಯದಲ್ಲಿ ಭ್ರಷ್ಟಾಚಾರ ನೆಲೆಯೂರಿದೆ: ಸರ್ಕಾರಿ ಹುದ್ದೆ, ಅಭಿವೃದ್ಧಿ ಕೆಲಸಕ್ಕಾಗಿ ಕಮಿಷನ್‌ ನೀಡಬೇಕಾಗಿದೆ. ಸದ್ಯ ಬಿಜೆಪಿ ಆಡಳಿತದಲ್ಲಿ ಹಣಕ್ಕಾಗಿ ಎಲ್ಲವೂ ನಡೆಯುತ್ತಿದೆ. ಪಿಎಸ್ಐ ನೇಮಕಾತಿಯಿಂದ ಹಿಡಿದು ಎಲ್ಲವೂ ಹಣದ ಹೊಳೆ ಹರಿಯುತ್ತಿದೆ. ಇದು ಭ್ರಷ್ಟಾಚಾರದಿಂದ ಸಾಧ್ಯವಾಗುತ್ತಿದೆ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದರು.

ಎಲ್ಲವನ್ನೂ ಸಾಧಿಸುವ ಕಲೆ:

ರಾಜಕಾರಣದಲ್ಲಿ ಯಾವುದು ಅಸಾಧ್ಯವಲ್ಲ. ರಾಜಕಾರಣದಲ್ಲಿ ಎನ್ನುವುದು ಎಲ್ಲವನ್ನೂ ಸಾಧಿಸುವ ಕಲೆ. ಸರ್ಕಾರ ಎಷ್ಟೇ ಪ್ರಬಲವಾಗಿದ್ದರೂ ಜನಾಭಿಪ್ರಾಯವೇ ಅಂತಿಮ.‌ ಯಾರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಪ್ರತಿ ಕ್ಷೇತ್ರಕ್ಕೂ ವೀಕ್ಷಕರನ್ನು ನೇಮಕಮಾಡಿ ನಿಗಾ ಇಡಲಾಗುವುದು ಎಂದರು.

ಕಾರ್ಯಕರ್ತರು ಪದವಿದರರು ಹಾಗೂ ಶಿಕ್ಷಕರನ್ನು ಭೇಟಿ ಮಾಡಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಬೇಕು. ಶಿಕ್ಷಣ ಕ್ಷೇತ್ರ ಅಭಿವೃದ್ಧಿಯಾಗಬೇಕಿದೆ. ಅಭ್ಯರ್ಥಿಗಳು ಗೆದ್ದು, ವಿಧಾನಪರಿಷತ್‌ ಪ್ರವೇಶಿದರೆ ಬದಲಾವಣೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಕೇವಲ ಅಭ್ಯರ್ಥಿಗಳು ಮಾತ್ರ ಚುನಾವಣೆಯಲ್ಲಿದ್ದಾರೆ ಎಂದು ಭಾವಿಸದೇ ಎಲ್ಲರೂ ಸಕ್ರೀಯರಾಗಿ ಕೆಲಸಮಾಡಬೇಕು. ಇನ್ನೂ ಕಾಲಾವಕಾಶವಿದೆ ಶಿಕ್ಷಣ ಕ್ಷೇತ್ರ ಬದಲಾವಣೆ ಹಂತ ನಮ್ಮಿಂದಲೇ ಆರಂಭವಾಗಲಿ ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಮಾತನಾಡಿ, ಎರಡು ಮತಕ್ಷೇತ್ರಗಳಲ್ಲಿ ಮೂರು ಜಿಲ್ಲೆಗಳಿವೆ. ಹಿರಿಯರು ಮತ್ತು ಯುವಕರಿಗೆ ತಲಾ ಒಂದು ಟಿಕೆಟ್ ನೀಡಲಾಗಿದೆ. ಇಬ್ಬರನ್ನೂ ಗೆಲ್ಲಿಸಿಕೊಡುವ ಹೊಣೆ ಕಾಂಗ್ರೆಸ್ ಕಾರ್ಯಕರ್ತರದ್ದಾಗಿದೆ ಎಂದರು.‌ ಭ್ರಷ್ಟಾಚಾರಕ್ಕೆ ಬಗ್ಗೆ ಟೀಕೆಸುವ ಸಮಯವಿಲ್ಲ, ಶಿಕ್ಷಕರ ಹಾಗೂ ಪದವಿರರ ಕ್ಷೇತ್ರಕ್ಕೆ ಕಾಂಗ್ರೆಸ್‌ ನೀಡಿರುವ ಕೊಡುಗೆಯನ್ನು ಮೂಟ್ಟಿಸಿದರೆ ಸಾಕು, ಗೆಲುವು ನಮ್ಮದೇ ಎಂದರು.

ಶಿಕ್ಷಕರ ಮತ ಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರು, ಜಿಲ್ಲಾ ಪಂಚಾಯಿತಿಯಿಂದ ಹಿಡಿದ ಸಂಸಸತ್ತಿನ ವರೆಗೆ ಜನಪ್ರತಿನಿಧಿಗಳಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಇದೀಗ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂಧಿಸುತ್ತಾರೆ.

ಪದವಿದರ ಕ್ಷೇತ್ರಕ್ಕೆ ಸುನೀಲ ಸಂಕ ಅವರು ಹೋರಾಟಗಾರರಾಗಿದ್ದು, ಉದ್ಯೋಗ ಸೃಷ್ಟಿಸದ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ದೇಶಾದ್ಯಂತ ಕೋಟ್ಯಂತರ ಪದವಿದರು ನಿರುದ್ಯೋಗಗಳಾಗಿದ್ದಾರೆ. ಈ ಭಾಗದ ಎಲ್ಲ ವಿಧ್ಯಾವಂತ ಯುವ ಜನಾಂಗಕ್ಕೆ ಅನುಕೂಲ ಕಲ್ಪಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಾರೆ. ಅವರಿಬ್ಬರನ್ನು ಗೆಲ್ಲಿಸುವ. ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಕ್ರಿಯರಾಗಬೇಕು ಎಂದರು.

ಮೆಡಿಕಲ್ ತಂದ ಪ್ರಕಾಶ ಹುಕ್ಕೇರಿ- ಲಕ್ಷ್ಮೀ ಹೆಬ್ಬಾಳಕರ್

 

ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ” ಕಾಂಗ್ರೆಸ್‌ 70 ವರ್ಷದ ಇತಿಹಾಸದಲ್ಲಿ ಶಿಕ್ಷಣ ಕ್ಷೇತ್ರಕ್ಕೆ   ಅಪಾರ ಕೊಡುಗೆ ನೀಡುವ ಮೂಲಕ ದೇಶದಲ್ಲಿ ಶಿಕ್ಷಣ ಕ್ರಾಂತಿ ಮಾಡಿದೆ. 2600 ಹಳ್ಳಿ 30 ವಿಧಾನ ಪರಿಷತ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಶಿಕ್ಷಕರು ಬುದ್ಧಿವಂತರು ಅವರಿಗೆ ಹೇಳುವ ದೊಡ್ಡ ವ್ಯಕ್ತಿಗಳು ನಾವಲ್ಲ, ತಮ್ಮ ಆಶೀರ್ವಾದ ತಮ್ಮ ಅಭ್ಯರ್ಥಿಗಳ ಮೇಲೆ ಇರಲಿ ಎಂದರು.

ಹಿರಿಯ ರಾಜಕಾರಣಿ ಹಾಗೂ ಮುತ್ಸದ್ದಿ ಪ್ರಕಾಶ ಹುಕ್ಕೇರಿ ಅವರಿಗೆ ಟಿಕೆಟ್ ನೀಡಿರುವ ವರಿಷ್ಠರಿಗೆ ಧನ್ಯವಾದ ಸಲ್ಲಿಸುತ್ತೆವೆ. ಜಿಲ್ಲೆಗೆ ಮೆಡಿಕಲ್ ಕಾಲೇಜು ತಂದ ಹೆಮ್ಮೆಯ ನಾಯಕ ಹುಕ್ಕೇರಿ ಅವರು, ಕೇಂದ್ರದಿಂದ ಮಹತ್ವದ ಯೋಜನೆಗಳನ್ನು ತಂದು ಬೆಳಗಾವಿ ಜಿಲ್ಲೆಯನ್ನು ಅಭಿವೃದ್ದಿ ಮಾಡಿದ್ದಾರೆ. ಹಿರಿಯ ನಾಯಕರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದರು.

ಪದವಿದರ ಕ್ಷೇತ್ರದ ಅಭ್ಯರ್ಥಿ ಸುನೀಲ ಸಂಕ ಮಾತನಾಡಿ, ಮತಯಾಚನೆ ಮಾಡಿದರು.
ಶಿಕ್ಷಕರ ಮತ ಕ್ಷೇತ್ರ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಮಾತನಾಡಿ, ಕೆಪಿಸಿಸಿ ಹಾಗೂ ಮೂರು ಜಿಲ್ಲೆಯ ಎಲ್ಲ ಮುಖಂಡರು ಸೇರಿಕೊಂಡು ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ನೀವೆಲ್ಲ ಗೆಲ್ಲಿಸಿ, ತಮ್ಮ ಸೇವೆಗೆ ಅವಕಾಶ ನೀಡಬೇಕು ಎಂದು ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವ ವಿನಯ ಕುಲಕರ್ಣಿ, ಮಾಜಿ ಸಚಿವ ಎ ಬಿ ಪಾಟೀಲ್, ಶಾಸಕರಾದ ಗಣೇಶ್ ಹುಕ್ಕೇರಿ, ಮಹಾತೇಂಶ ಕೌಜಲಗಿ, ಬಿ.ಡಿ.ಇನಾಮದಾರ್, ಎಚ್‌.ವಾಯ್ ಮೇಟಿ, ಜೆ.ಟಿ.ಪಾಟೀಲ, ಮಾಜಿ ಸಚಿವೆ ಉಮಾಶ್ರೀ, ಮಾಜಿ ಶಾಸಕ ರಮೇಶ ಕುಡಚಿ, ಕಾಕಾ ಸಾಹೇಬ ಪಾಟೀಲ, ರಾಜು ಸೇಠ, ಪಿರೋಜ ಸೇಠ , ಲಕ್ಷ್ಮಣರಾವ್ ಚಿಂಗಳೆ, ವಿನಯ ನಾವಲಗಟ್ಟಿ, ಅರವಿಂದ ದಳವಾಯಿ, ಪ್ರದೀಪ ಎಂ ಜೆ, ಮಾಜಿ ಶಾಸಕ ಎಸ್‌ ಜಿ ನಂಜನಮಠ, ರಾಜು ಆಲ್ಲಗೂರ ಜಯಶ್ರೀ ಮಾಳಗಿ ಹಾಗೂ ಇತರರು ಇದ್ದರು.

ವಿಧಾನಸಭೆ ಸಚಿವಾಲಯ ಬಂದ್ ಗೆ ಕರೆ; ಸರ್ಕಾರದ ವಿರುದ್ಧ ನೌಕರರ ಪ್ರತಿಭಟನೆ

ಪ್ರಕಾಶ ಹುಕ್ಕೇರಿ, ಸುನೀಲ ಸಂಕ ನಾಮಪತ್ರ ಸಲ್ಲಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button