Kannada NewsLatestUncategorized

*ಬೆಳಗಾವಿಯಲ್ಲಿ 300 ಇ ಬೈಕ್, ಸೈಕಲ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜನರ ಓಡಾಟಕ್ಕಾಗಿ ಅನುಕೂಲವಾಗಲು ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ಪರಿಸರ ಸ್ನೇಹಿ ಇ ಸೈಕಲ್ ಹಾಗೂ ಇ ಬೈಕ್‌ಗಳಿಗೆ ಬೆಳಗಾವಿಯ ಚೆನ್ನಮ್ಮ ವೃತ್ತದ ಹತ್ತಿರದಲ್ಲಿ ಶಾಸಕ ಅನಿಲ ಬೆನಕೆ ಅವರು ಚಾಲನೆ ನೀಡಿದರು.

ಬಳಿಕ ಮಾದ್ಯಮಗಳ ಜೊತೆಗೆ ಮಾತನಾಡಿದ ಅವರು ಬೆಳಗಾವಿ ನಗರದಲ್ಲಿ ಸಾರ್ವಜನಿಕರಿಗೆ ಸಂಚಾರಕ್ಕೆ ಅನುಕೂಲವಾಗುವಂತೆ 100ಇ ಸೈಕಲ್, 100 ಇ ಬೈಕ್ ಹಾಗೂ 100 ಸೈಕಲ್ ಹೀಗೆ 300 ಇಲೆಕ್ಟ್ರಿಕಲ್ ಸೈಕಲ್ , ಇಲೆಕ್ಟ್ರಿಕಲ್ ಬೈಕ್ ಹಾಗೂ ಸೈಕಲ್‌ಗಳನ್ನು ನಗರದಲ್ಲಿ 20 ಸ್ಟೇಷನ್ ಗಳನ್ನು ಮಾಡಿ ಜನರ ಬಳಕೆಗೆ ಜಾರಿಗೆ ತರಲಾಗಿದೆ.

ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಇವುಗಳಿಗೆ ಬೇಡಿಕೆ ಜಾಸ್ತಿ ಆದರೆ ಇನ್ನೂ ಹೆಚ್ಚಿನ ಸ್ಟೇಷನ್ ಮಾಡಿ ಹೆಚ್ಚುವರಿ ಸೈಕಲ್ ಹಾಗೂ ಬೈಕ್‌ಗಳನ್ನು ಜನರ ಅನುಕೂಲಕ್ಕಾಗಿ ಜಾರಿಗೆ ತರಲಿದ್ದೇವೆ ಎಂದು ತಿಳಿಸಿದರು.

ನಂತರದಲ್ಲಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಪ್ರವೀಣ ಬಾಗೇವಾಡಿ ಅವರು ಮಾತನಾಡಿ ಸಾರ್ವಜನಿಕರು ಇ ಬೈಕ್ ಹಾಗೂ ಇ ಸೈಕಲ್ ಬಳಕೆ ಮಾಡಬೇಕು ಇದರಿಂದ ಪರಿಸರ ರಕ್ಷಣೆ ಜೊತೆಗೆ ಸಂಚಾರ ದಟ್ಟಣೆ ತಪ್ಪಿಸಬೇಕು, ಇ ಸೈಕಲ್ ಹಾಗೂ ಇ ಬೈಕ್ ಮತ್ತು ಸೈಕಲ್‌ಗಳನ್ನು ಬಳಕೆ ಮಾಡಲು ಸ್ಮಾಟ್ ಪೋನ್‌ಗಳಲ್ಲಿ ಯಾನ ಎಂಬ ಆಪ್ ನ್ನು ತೆಗೆದುಕೊಳ್ಳಬೆಕು ಎಂದರು. ಅರ್ಧ ಗಂಟೆಗೆ ಇ ಸೈಕಲ್ ಗಳಿಗೆ 15 ರೂಪಾಯಿ, ಸೈಕಲ್‌ಗಳಿಗೆ ೫ ರೂಪಾಯಿ ಹಾಗೂ ಇ ಬೈಕ್‌ಗಳಿಗೆ 30 ರೂಪಾಯಿ ದರ ನಿಗದಿ ಮಾಡಲಾಗಿದೆ ಎಂದು ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಜಿಲ್ಲಾಧಿಕಾರಿಗಳಾದ ನಿತೇಶ ಪಾಟೀಲ, ಸ್ಮಾರ್ಟ್ ಸಿಟಿ ನಿರ್ದೇಶಕರ ಪ್ರವೀಣ ಬಾಗೇವಾಡಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಿ. ಎಸ್. ಕಮತೆ, ಶಾಲಿನಿ ಬಿರಾದಾರ, ನಗರ ಸೇವಕರುಗಳು ಹಾಗೂ ಇತರರು ಉಪಸ್ಥಿತರಿದ್ದರು.

 

*ಇಂದು ಬೆಳಗಾವಿಯಲ್ಲಿ ಲೋಕಾರ್ಪಣೆಗೊಂಡಿದೆ ‘ಯಾನ* ’

https://pragati.taskdun.com/yana-will-be-inaugurated-in-belgaum-today/

*ನಮ್ಮ ನೆಲವನ್ನು ಒಂದಿಂಚೂ ಬಿಟ್ಟುಕೊಡುವುದಿಲ್ಲ; ಬೆಳಗಾವಿ ಎಂದಿಗೂ ನಮ್ಮದೇ: ಶಾಸಕ ಬಾಲಚಂದ್ರ ಜಾರಕಿಹೊಳಿ*

https://pragati.taskdun.com/gokak6th-kannada-sahitya-sammelanabalachandra-jarakiholi/

 

*PFI ರೀತಿ ಕಾಂಗ್ರೆಸ್ ನ್ನು ಬ್ಯಾನ್ ಮಾಡುವ ಸ್ಥಿತಿ ಬರಲಿದೆ ಎಂದ ಈಶ್ವರಪ್ಪ*

https://pragati.taskdun.com/k-s-eshwarappad-k-shivakumarpficongress/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button