Kannada NewsLatest

ಗೋಕಾಕ್ ಪಾಲ್ಸ್ ಕಂದಕಕ್ಕೆ ಬಿದ್ದ ಯುವಕ ಪವಾಡದ ರೀತಿ ಬದುಕುಳಿದಿದ್ದು ಹೇಗೆ?

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸೆಲ್ಫಿ ತೆಗೆಯಲೆಂದು ಹೋಗಿ ಆಯತಪ್ಪಿ ಆಳವಾದ ಕಂದಕಕ್ಕೆ ಬಿದ್ದ ಯುವಕನೊಬ್ಬ ಪವಾಡ ರೀತಿಯಲ್ಲಿ ಬದುಕುಳಿದು ಬಂದ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ಫಾಲ್ಸ್ ಬಳಿ ನಡೆದಿದೆ.

ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದ ಯುವಕ ಪ್ರದೀಪ್, ಗೋಕಾಕ್ ಫಾಲ್ಸ್ ಬಳಿ ಸೆಲ್ಫಿ ಗಾಗಿ ಫೋಟೋ ಕ್ಲಿಕ್ಕಿಸಲು ಹೋಗಿ ಆಯತಪ್ಪಿ 140 ಅಡಿ ಆಳದ ಕಂದಕಕ್ಕೆ ಬಿದ್ದಿದ್ದಾನೆ. ತಕ್ಷಣ ಯುವಕನ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ತಡರಾತ್ರಿಯಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಅಲ್ಲದೇ ಯುವಕ ಎಲ್ಲಿದ್ದಾನೆ ಎಂಬುದೂ ಗೊತ್ತಾಗುತ್ತಿರಲಿಲ್ಲ. ಕಂದಕಕ್ಕೆ ಬಿದ್ದ ಯುವಕ ಪ್ರಜ್ಞೆ ತಪ್ಪಿದ್ದರಿಂದ ಫೋನ್ ರಿಂಗ್ ಆಗುತ್ತಿದ್ದರು ಆತನಿಗೆ ಫೋನ್ ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿ ಪೊಲೀಸರು ವಾಪಸ್ ತೆರಳಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವಕ ರಾತ್ರಿಯಿಡಿ ಕಂದಕದಲ್ಲೇ ಸಿಲುಕಿಕೊಂಡಿದ್ದ.

ಆದರೆ ಯುವಕ ಪವಾಡ ರೀತಿಯಲ್ಲಿ ಬದುಕುಳಿದಿದ್ದು, ಇಂದು ಬೆಳಗಾಗುತ್ತಿದ್ದಂತೆ ಎಚ್ಚರಗೊಂಡ ಯುವಕ ಕಂದಕದಿಂದಲೇ ಸ್ನೇಹಿತರಿಗೆ ಕರೆ ಮಾಡಿದ್ದಾನೆ. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಮತ್ತೆ ಕಾರ್ಯಾಚರಣೆ ನಡೆಸಿ ಯುವಕನನ್ನು ಕಂದಕದಿಂದ ಮೇಲೆತ್ತಿದ್ದಾರೆ.

Home add -Advt

ಸದ್ಯ ಯುವಕ ನಿಗೆ ಸಣ್ಣಪುಟ್ಟಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ; ಶಾರುಖ್ ಖಾನ್ ಪುತ್ರ ಎನ್ ಸಿಬಿ ಬಲೆಗೆ

Related Articles

Back to top button